Saturday, June 6, 2026
Homeಕರಾವಳಿಮಗುವಿಗೆ ಜನ್ಮ ನೀಡಿದ ಕೇರಳದ ತೃತೀಯ ಲಿಂಗಿ: ಇದು ದೇಶದಲ್ಲೇ ಮೊದಲ ಪ್ರಕರಣ

ಮಗುವಿಗೆ ಜನ್ಮ ನೀಡಿದ ಕೇರಳದ ತೃತೀಯ ಲಿಂಗಿ: ಇದು ದೇಶದಲ್ಲೇ ಮೊದಲ ಪ್ರಕರಣ

- Advertisement -
- Advertisement -

ಕೇರಳ; ಇತ್ತೀಚೆಗೆ ಫೋಟೋ ಶೂಚ್ ಮೂಲಕ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದ ಕೇರಳದ ತೃತೀಯ ಲಿಂಗಿ ಜೋಡಿ ಜಿಯಾ ಪಾವಲ್ ಹಾಗೂ ಜಹ್ಹಾದ್ ತಮ್ಮ ಮಗುವನ್ನು ಬರಮಾಡಿಕೊಂಡಿದ್ದಾರೆ.

ಜಹ್ಹಾದ್ ಕೇರಳದ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಇದು ದೇಶದ ಮೊದಲ ಪ್ರಕರಣ ಎಂದು ಪರಿಗಣಿಸಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಸೇರಿಯನ್ ವಿಭಾಗದ ಮೂಲಕ ಬೆಳಿಗ್ಗೆ 9.30 ರ ಸುಮಾರಿಗೆ ಮಗು ಜನಿಸಿತು ಎಂದು ಜಹ್ದಾದ್ ಸಂಗಾತಿ ಜಿಯಾ ಪಾವಲ್ ತಿಳಿಸಿದ್ದಾರೆ.

ಮಗು ಮತ್ತು ಮಗುವಿಗೆ ಜನ್ಮ ನೀಡಿದ ಜಿಯಾ ಪಾವಲ್ ಸಂಗಾತಿ ಜಹ್ಹಾದ್ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಜಿಯಾ ಪಾವಲ್ ಹೇಳಿದ್ದಾರೆ. ಆದರೆ ಯಾವ ಮಗು ಜನಿಸಿದೆ ಎಂಬುವುದು ಸದ್ಯ ತಿಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

- Advertisement -

Latest News

error: Content is protected !!