Saturday, June 6, 2026
Homeಪ್ರಮುಖ-ಸುದ್ದಿಕ್ಯಾಲಿಕಟ್ ವಿಮಾನ ದುರಂತದಲ್ಲಿ ಅದೃಷ್ಟವಶಾತ್ ಬದುಕುಳಿದ ಒಂದೇ ಕುಟುಂಬದ 7 ಮಂದಿ

ಕ್ಯಾಲಿಕಟ್ ವಿಮಾನ ದುರಂತದಲ್ಲಿ ಅದೃಷ್ಟವಶಾತ್ ಬದುಕುಳಿದ ಒಂದೇ ಕುಟುಂಬದ 7 ಮಂದಿ

- Advertisement -
- Advertisement -

ಕ್ಯಾಲಿಕಟ್ : ಕೋಯಿಕ್ಕೋಡ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಾಪಘಾತದಲ್ಲಿ ಇಬ್ಬರು ಪೈಲಟ್‌ಗಳೂ ಸೇರಿ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ.

ಅದೃಷ್ಟವಶಾತ್‌, ಇದೇ ವೇಳೆ, ದುಬೈ ಮೂಲದ ಕೇರಳದ ವ್ಯಕ್ತಿಯೊಬ್ಬರ ಕುಟುಂಬದ ಏಳೂ ಮಂದಿ ಈ ಅವಘಡದಲ್ಲಿ ಬದುಕುಳಿದಿದ್ದಾರೆ. ಶೆಮಿರ್ ವಡಕ್ಕನ್ ಪತಾಪ್ಪಿರಿಯಂ ತಮ್ಮ ಕುಟುಂಬದ ಸದಸ್ಯರ ಬಗ್ಗೆ ತಿಳಿದುಕೊಳ್ಳಲು ಹರಸಾಹಸ ಪಟ್ಟು ಸಾಕುಸಾಕಾಗಿ ಹೋಗಿದ್ದರು.

ಕುಟುಂಬದ ಸದಸ್ಯರೆಲ್ಲರಿಗೂ ಅಪಘಾತದಲ್ಲಿ ಗಾಯಗಳಾಗಿದ್ದು, ಇವ್ಯಾವೂ ಮಾರಣಾಂತಿಕವಲ್ಲ. ಇಲ್ಲಿನ ಕ್ಯಾಲಿಕಟ್ ಹಾಗೂ ಮಲಪ್ಪುರಂ ಆಸ್ಪತ್ರೆಗಳ ಟ್ರಾಮಾ ಕೇಂದ್ರಗಳಲ್ಲಿ ದಾಖಲಾಗಿ ಅವರು ಬದುಕುಳಿದಿದ್ದಾರೆ.

ದುಬೈನಿಂದ ಕ್ಯಾಲಿಕಟ್‌ಗೆ 190 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ ಇಂಡಿಯಾ ವಿಮಾನವು, ಶುಕ್ರವಾರ ಸಂಜೆ 7-40ಕ್ಕೆ ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ಅಪ್ಪಳಿಸಿದೆ.

- Advertisement -

Latest News

error: Content is protected !!