Monday, June 8, 2026
Homeತಾಜಾ ಸುದ್ದಿಕೇರಳ: ಗದ್ದೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಮೀನು ಗಂಟಲೊಳಗೆ ಸಿಕ್ಕಿ ಯುವಕ ಸಾವು

ಕೇರಳ: ಗದ್ದೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಮೀನು ಗಂಟಲೊಳಗೆ ಸಿಕ್ಕಿ ಯುವಕ ಸಾವು

- Advertisement -
- Advertisement -

ಕೇರಳ: ಗದ್ದೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಮೀನು ಗಂಟಲೊಳಗೆ ಸಿಕ್ಕಿ ಯುವಕ ಸಾವನ್ನಪ್ಪಿರುವ ಘಟನೆ ಆಲಪ್ಪುಳ ಸಮೀಪದ ಕಾಯಂಕುಲಂನಲ್ಲಿ ನಡೆದಿದೆ. ಪುತ್ತುಪ್ಪಲ್ಲಿಯ ಆದರ್ಶ್ ಅಲಿಯಾಸ್ ಉನ್ನಿ (25) ಮೃತ ಯುವಕ.

ಆದರ್ಶ್ ಅಲಿಯಾಸ್ ಉನ್ನಿ ಸಂಜೆ 4.30ರ ಸುಮಾರಿಗೆ ತನ್ನ ಸ್ನೇಹಿತರೊಂದಿಗೆ ಗದ್ದೆಗೆ ನೀರು ಹಾಯಿಸಿ ಮೀನು ಹಿಡಿಯುತ್ತಿದ್ದರು. ಈ ವೇಳೆ  ಒಂದು ಮೀನನ್ನು ಹಿಡಿದು ಇನ್ನೊಂದು ಮೀನನ್ನು ಬಾಯಯಲ್ಲಿ ಹಿಡಿದುಕೊಂಡಿದ್ದರು. ಆ ಮೀನು ಗಂಟಲೊಳಗೆ ಹೋಗಿ ಸಿಲುಕಿಕೊಂಡಿದೆ. ಪರ

ಕೂಡಲೇ ಯುವಕನನ್ನು ಓಚಿರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಆದರ್ಶ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!