Wednesday, June 26, 2024
Homeಕರಾವಳಿಮಂಗಳೂರು: ನೀಫಾ ಶಂಕೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ವರದಿ ನೆಗೆಟಿವ್; ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ

ಮಂಗಳೂರು: ನೀಫಾ ಶಂಕೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ವರದಿ ನೆಗೆಟಿವ್; ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ

spot_img
- Advertisement -
- Advertisement -

ಮಂಗಳೂರು: ನಿಫಾ ಸೋಂಕಿನ ಶಂಕೆಯಲ್ಲಿ ಇಲ್ಲಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಪರೀಕ್ಷಾ ವರದಿ‌ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಕಾರವಾರ ಮೂಲದ ಈ ಯುವಕ ಗೋವಾದಲ್ಲಿ ಆರ್ ಟಿಪಿಸಿಆರ್ ತಯಾರಿಕಾ ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಂದ ರಜೆಯಲ್ಲಿ ಕಾರವಾರಕ್ಕೆ ಬಂದವನಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ನಿಫಾ ವೈರಸ್ ಇರಬಹುದು ಎಂದು ಕಾರವಾರ ಆಸ್ಪತ್ರೆಗೆ ಹೋಗಿ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಬಂದಿದ್ದಾನೆ. ಆ ಬಳಿಕ ಅಲ್ಲಿಂದ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಬಂದಿದ್ದು, ಆತನ ಸ್ಯಾಂಪಲ್‌ನ್ನು ಸಂಗ್ರಹ ಮಾಡಿರುವ ದಕ್ಷಿಣಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಪುಣೆಯ ಲ್ಯಾಬ್‌ಗೆ ಕಳುಹಿಸಿತ್ತು. ಸದ್ಯ ವರದಿ ನೆಗೆಟಿವ್ ಬಂದಿದ್ದು ನಿಟ್ಟುಸಿರು ಬಿಡುವಂತಾಗಿದೆ.

ಗೋವಾದಿಂದ ರಜೆ ಮೇಲೆ ಕಾರವಾರಕ್ಕೆ ಬೈಕ್ ನಲ್ಲಿ ಮಳೆಯಲ್ಲಿ ಬಂದಿದ್ದು, ಹೀಗಾಗಿ ಜ್ವರ ಕಾಣಿಸಿಕೊಂಡಿದೆ. ಆತನಿಗೆ ನಿಫಾ ಸೋಂಕಿನ ಶಂಕೆ ಇಲ್ಲದಿದ್ದರೂ, ಸ್ವಯಂ ತಪಾಸಣೆಗೆ ಇಚ್ಚಿಸಿದ್ದರಿಂದ ಹಾಗೂ ನಿಫಾ ಬಗ್ಗೆ ನಿರ್ಲಕ್ಷ ಮಾಡಲು ಸಾಧ್ಯವಿಲ್ಲದಿದ್ದರಿಂದ ಟೆಸ್ಟ್ ಗೆ ಕಳುಹಿಸಿದ್ದೇವು. ಇದೀಗ ನಿಫಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!