Sunday, June 7, 2026
Homeತಾಜಾ ಸುದ್ದಿಕೊರೋನಾಗೆ ಬಲಿಯಾದ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮಹಮ್ಮದ್ ಯೂಸುಫ್

ಕೊರೋನಾಗೆ ಬಲಿಯಾದ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮಹಮ್ಮದ್ ಯೂಸುಫ್

- Advertisement -
- Advertisement -

ಬೆಂಗಳೂರು: ಡೆಡ್ಲಿ ಕೋವಿಡ್ ಸೋಂಕಿಗೆ ತುತ್ತಾಗಿದ್ದ ರಾಜ್ಯದ ಮುಸ್ಲಿಂ ಸಮಾಜದ ಹಿರಿಯ ನಾಯಕ, ಕೊಡುಗೈ ದಾನಿ ಡಾ. ಮುಹಮ್ಮದ್ ಯೂಸುಫ್ ಇಂದು ನಿಧನರಾಗಿದ್ದಾರೆ.

ಮಹಮ್ಮದ್ ಯೂಸುಫ್ ಅವರ ನಿಧನಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಸಂತಾಪ ಸೂಚಿಸಿದ್ದಾರೆ. ‘ರಾಜ್ಯದ ವಕ್ಫ್ ಬೋರ್ಡ್ ಅಧ್ಯಕ್ಷರಾದ ಶ್ರೀ ಮಹಮ್ಮದ್ ಯೂಸುಫ್ ಅವರ ನಿಧನದ ಸುದ್ದಿ ದುಃಖಕರ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಬಂಧು ಬಳಗದ ವರೆಲ್ಲರಿಗೂ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ.’ ಎಂದು ಟ್ವೀಟ್ ಮಾಡಿದ್ದಾರೆ.

ದಫನ ಕಾರ್ಯ ಬೆಂಗಳೂರಿನ ಗೋವಿಂದಪುರದಲ್ಲಿರುವ ತಾನೇ ನಿರ್ಮಿಸಿರುವ ಮಸ್ಜಿದ್ ಇ ಮುಝಮ್ಮಿಲ್ ಪಕ್ಕದಲ್ಲಿರುವ ಕಬರ್ ಸ್ಥಾನದಲ್ಲಿ ನಡೆಯಲಿದೆ. ಅವರ ಮಗ್ಫಿರತ್ ಗಾಗಿ ಪ್ರಾರ್ಥಿಸುವಂತೆ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಎನ್.ಕೆ.ಎಮ್. ಶಾಫಿ ಸಆದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!