Sunday, June 2, 2024
Homeತಾಜಾ ಸುದ್ದಿಫೇಸ್‌ಬುಕ್‌ ಲೈವ್ ಮುಗಿಸಿ ಆತ್ಮಹತ್ಯೆಗೆ ಶರಣಾದ ನಟಿ

ಫೇಸ್‌ಬುಕ್‌ ಲೈವ್ ಮುಗಿಸಿ ಆತ್ಮಹತ್ಯೆಗೆ ಶರಣಾದ ನಟಿ

spot_img
- Advertisement -
- Advertisement -

ಮುಂಬೈ: ಉತ್ತರ ಮುಂಬೈಯ ಉಪನಗರ ದಹಿಸಾರ್‌ನ ಅಪಾರ್ಟ್ ಮೆಂಟ್ ನಲ್ಲಿ ಬಾಡಿಗೆಗಿದ್ದ ಭೋಜ್ ಪುರಿ ನಟಿ ಅನುಪಮಾ ಪಾಠಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಿಹಾರದಿಂದ ಮುಂಬೈಗೆ ಸಿನೆಮಾ ಜಗತ್ತಿನಲ್ಲಿ ಅವಕಾಶ ಅರಸಿ ಬಂದಿದ್ದ ಅನುಪಮಾ ಪಾಠಕ್ ಹಲವು ಭೋಜ್ ಪುರಿ ಸಿನೆಮಾಗಳಲ್ಲಿ ಮತ್ತು ಟಿವಿ ಶೋಗಳಲ್ಲಿ ಭಾಗವಹಿಸಿದ್ದರು.

ಆಗಸ್ಟ್ 2ರಂದೇ ಅವರು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ. ಈ ಘಟನೆ ತಡವಾಗಿ ವರದಿಯಾಗಿದೆ. ಸಾಯುವ ಒಂದು ದಿನ ಮುನ್ನ ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದ ಅನುಪಮಾ, ತಾವು ವಂಚನೆಗೆ ಒಳಗಾಗಿದ್ದು, ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ ಎಂದು ಹೇಳಿಕೊಂಡಿದ್ದರು

ಡೆತ್ ನೋಟ್ ನಲ್ಲಿ ಏನಿದೆ ?
ಅವರ ಮೃತದೇಹ ದೊರೆತ ಸ್ಥಳದಲ್ಲಿ ಆತ್ಮಹತ್ಯೆಯ ಟಿಪ್ಪಣಿ ಪತ್ತೆಯಾಗಿದೆ. ಅದರಲ್ಲಿ ಅವರು ಮಲಾಡ್‌ನಲ್ಲಿ ವಿಸ್ಡಮ್ ಪ್ರೊಡ್ಯೂಸರ್ ಕಂಪೆನಿ ಎಂಬ ಸಂಸ್ಥೆಯಲ್ಲಿ 10,000 ರೂ ಹೂಡಿಕೆ ಮಾಡಿದ್ದು, ಡಿಸೆಂಬರ್‌ನಲ್ಲಿ ಅದು ಮೆಚ್ಯುರ್ ಆಗಿದ್ದರೂ ತಮಗೆ ಹಣ ವಾಪಸ್ ಸಿಕ್ಕಿಲ್ಲ ಎಂದು ಬರೆದುಕೊಂಡಿದ್ದಾರೆ. ಜತೆಗೆ ಮನೀಶ್ ಝಾ ಎಂಬಾತನ ಹೆಸರನ್ನು ಅವರು ಉಲ್ಲೇಖಿಸಿದ್ದಾರೆ ಎನ್ನಲಾಗಿದ್ದು, ಲಾಕ್ ಡೌನ್ ಸಮಯದಲ್ಲಿ ತಮ್ಮ ದ್ವಿಚಕ್ರ ವಾಹನ ಕೊಂಡೊಯ್ದರೂ ಅದನ್ನು ಮರಳಿಸಿರಲಿಲ್ಲ ಎಂದು ಆರೋಪಿಸಿದ್ದಾರೆ.

- Advertisement -
spot_img

Latest News

error: Content is protected !!