Friday, June 5, 2026
HomeUncategorizedರಾಜ್ಯದಲ್ಲಿಂದು 75 ಸೋಂಕಿತರು ಸಾವು; ಪಾಸಿಟಿವಿಟಿ ದರ ಶೇಕಡಾ 1.64

ರಾಜ್ಯದಲ್ಲಿಂದು 75 ಸೋಂಕಿತರು ಸಾವು; ಪಾಸಿಟಿವಿಟಿ ದರ ಶೇಕಡಾ 1.64

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿಂದು 2,743 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 28,62,338ಕ್ಕೆ ಏರಿಕೆಯಾಗಿದೆ.

ಇಂದು ಈ ಮಹಾಮಾರಿಗೆ 75 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 35,601 ಜನ ಮೃತಪಟ್ಟಿದ್ದಾರೆ.ಅಲ್ಲದೆ 3081 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 27,87,111 ಜನ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಸದ್ಯ 39,603 ಸಕ್ರಿಯ ಪ್ರಕರಣಗಳು ಇವೆ.

ರಾಜ್ಯಾದ್ಯಂತ ಇಂದು 1,66,631 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 2,743 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 1.64ಕ್ಕೆ ಇಳಿದಿದೆ.

- Advertisement -

Latest News

error: Content is protected !!