Monday, June 8, 2026
Homeತಾಜಾ ಸುದ್ದಿಗೃಹ ಸಚಿವ 'ಬಸವರಾಜ ಬೊಮ್ಮಾಯಿ'ಗೂ ಕೊರೊನಾ ಸೋಂಕು ದೃಢ..!

ಗೃಹ ಸಚಿವ ‘ಬಸವರಾಜ ಬೊಮ್ಮಾಯಿ’ಗೂ ಕೊರೊನಾ ಸೋಂಕು ದೃಢ..!

- Advertisement -
- Advertisement -

ಬೆಂಗಳೂರು: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವ್ರಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ವೈದ್ಯರ ಸಲಹೆಯ ಮೇರೆಗೆ ಹೋಂ ಐಸೋಲೇಶನ್‌ಲ್ಲಿದ್ದಾರೆ. ಗೃಹ ಸಚಿವರ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಸಚಿವರು ಕೊರೊನಾ ಟೆಸ್ಟ್‌ಗೆ ಒಳಗಾಗಿದ್ರು .ಸಧ್ಯ ವರದಿ ಬಂದಿದ್ದು, ಬಸವರಾಜ ಬೊಮ್ಮಯಿ ಅವ್ರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸಚಿವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. “ನನಗೂ ಸಹ ಸೋಂಕು ದೃಢಪಟ್ಟಿದೆ. ಯಾವುದೇ ರೀತಿಯ ರೋಗ ಲಕ್ಷಣಗಳು ಇರುವುದಿಲ್ಲ ಹಾಗೂ ಆರೋಗ್ಯವಾಗಿದ್ದೇನೆ” ಎಂದು ಸಚಿವರು ಹೇಳಿದ್ದಾರೆ.

“ಇತ್ತೀಚೆಗೆ ನನ್ನ ನೇರ ಸಂಪರ್ಕಕ್ಕೆ ಬಂದಿರುವವರು ಕೂಡಲೇ ಪರೀಕ್ಷೆಗೆ ಒಳಪಡುವಂತೆ ಹಾಗೂ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರುತ್ತೇನೆ” ಎಂದು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!