Monday, May 6, 2024
Homeತಾಜಾ ಸುದ್ದಿಪಿಯು ಕಾಲೇಜು ಅತಿಥಿ ಉಪನ್ಯಾಸಕರ ಗೌರವ ಸಂಭಾವನೆ ಹೆಚ್ಚಿಸಿದ ಸರ್ಕಾರ: ರಾಜ್ಯ ಸರ್ಕಾರದಿಂದ ಆದೇಶ

ಪಿಯು ಕಾಲೇಜು ಅತಿಥಿ ಉಪನ್ಯಾಸಕರ ಗೌರವ ಸಂಭಾವನೆ ಹೆಚ್ಚಿಸಿದ ಸರ್ಕಾರ: ರಾಜ್ಯ ಸರ್ಕಾರದಿಂದ ಆದೇಶ

spot_img
- Advertisement -
- Advertisement -

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುವ ಅತಿಥಿ ಉಪನ್ಯಾಸಕರ ಗೌರವ ಸಂಭಾವನೆಯನ್ನು 3,000 ರೂ.ಗಳಷ್ಟು ಸರ್ಕಾರ ಹೆಚ್ಚಿಸಿದೆ ಎಂದು ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಇ್ದದಲಾಖೆಯ ಸಚಿವ ಬಿ.ಸಿ ನಾಗೇಶ್‌ ಟ್ವೀಟ್‌ ಮಾಡಿದ್ದಾರೆ.

ಅವರು ತಮ್ಮ ಟ್ವೀಟ್ ನಲ್ಲಿ “ಅತಿಥಿ ಉಪನ್ಯಾಸಕರ ಗೌರವ ಸಂಭಾವನೆಯನ್ನು ಪರಿಷ್ಕರಣೆ ಮಾಡಲಾಗಿದ್ದು, 9 ಸಾವಿರದಿಂದ 12 ಸಾವಿರ ರೂಪಾಯಿಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಸಕ್ತ ಸಾಲಿನಲ್ಲಿ ಉಪನ್ಯಾಸಕರ ಕೊರತೆ ನೀಗಿಸಲು ಸುಮಾರು 3,708 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ” ಎಂದು ಬರೆದಿದ್ದಾರೆ.

ಪಿಯು ಕಾಲೇಜಿನ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆಯನ್ನು ಕಳೆದ ಐದಾರು ವರ್ಷಗಳಿಂದ ಸರ್ಕಾರ ಮಾಡಿರಲಿಲ್ಲ. ತಿಂಗಳಿಗೆ 15 ಸಾವಿರದಿಂದ 20 ಸಾವಿರ ಗೌರವ ವೇತನ ನೀಡಬೇಕೆಂದು ಅತಿಥಿ ಉಪನ್ಯಾಸಕರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಆದರೆ, ಸರ್ಕಾರವು 12,000 ರೂ. ಗೌರವಧನ ನಿಗಧಿಪಡಿಸಿ ಆದೇಶ ಹೊರಡಿಸಿದೆ.

ಇನ್ನು ರಾಜ್ಯದಲ್ಲಿ 1,250ಕ್ಕೂ ಹೆಚ್ಚು ಪದವಿ ಪೂರ್ವ ಕಾಲೇಜುಗಳಿದ್ದು, ಸುಮಾರು 3,267 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಜೂನ್‌ ತಿಂಗಳಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಸಂಭಾವನೆಯನ್ನು 7,500 ದಿಂದ 10,000 ರೂಪಾಯಿಗೆ ಏರಿಕೆ ಮಾಡಿದ್ದ ಸರ್ಕಾರ, ಪ್ರೌಢಶಾಲಾ ಅತಿಥಿ ಉಪನ್ಯಾಸಕರ ಸಂಭಾವನೆಯನ್ನು 8,000 ದಿಂದ 10,500 ರೂಪಾಯಿಗೆ ಏರಿಕೆ ಮಾಡಿತ್ತು.

- Advertisement -
spot_img

Latest News

error: Content is protected !!