- Advertisement -
- Advertisement -
ಮಂಗಳೂರು : ಕರ್ನಾಟಕ ರಾಜ್ಯಕ್ಕೆ ಕೊರೊನ ಮಹಾ ಕಂಟಕವಾಗುತ್ತಿದೆ.ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ದಾಖಲೆಯತ್ತ
ದಾಪುಗಾಲಿಕ್ಕುತ್ತಿದೆ . ಇಂದು ದ.ಕ ಜಿಲ್ಲೆಯಲ್ಲಿ 1 ಮತ್ತು ಉಡುಪಿ ಜಿಲ್ಲೆಯಲ್ಲಿ 18 ಸೋಂಕಿತರು ಪತ್ತೆಯಾಗಿದ್ದರೆ .
ರಾಜ್ಯದಲ್ಲಿ ಇಂದು ಹೊಸ ಸೋಂಕಿತರ ಸಂಖ್ಯೆ 97 ಸೇರ್ಪಡೆಯೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2056 ಕ್ಕೆ ಏರಿಕೆ ಆಗಿದೆ . ಈ ಪೈಕಿ ಹೆಚ್ಚಿನ ಪ್ರಕರಣಗಳಿಗೆ ಮಹಾರಾಷ್ಟ್ರ ಮತ್ತು ವಿದೇಶಿ ನಂಟು ಇರುವುದು ಜನತೆಯಲ್ಲಿ ಆತಂಕಕ್ಕೆ ಎಡೆ ಮಾಡಿದೆ . ಆದರೆ ಅವರೆಲ್ಲ ಕ್ವಾರಂಟೈನ್ ನಲ್ಲಿ ಇರುವುದು ಸ್ವಲ್ಪ ನೆಮ್ಮದಿಯಾಗಿದೆ
- Advertisement -