ಕಾರ್ಕಳ:ಐಟಿಐ ವಿದ್ಯಾರ್ಥಿಯೊಬ್ಬ ತಾಣ ಮನೆಯಲ್ಲಿ ಫ್ಯಾನ್ ಹುಕ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನೀರೆ ಗ್ರಾಮದ ನಿವಾಸಿ ಸದಾಶಿವ ಅವರ ಮಗ ಅನೀಶ್ (19) ಎಂದು ಗುರಿತಿಸಲಾಗಿದೆ.ತನ್ನ ಪೋಷಕರು ಇಲ್ಲದಿದ್ದಾಗ ಅನೀಶ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾನೆಂದು ಹೇಳಲಾಗಿದೆ.
ಅನೀಶ್ ಜೊತೆ ಪರೀಕ್ಷೆಗೆ ಹೋಗಲು ಸಂಬಂಧಿಯಾದ ನೆರೆಮನೆಯ ಆಶಿಶ್ ಬೆಳಿಗ್ಗೆ ಫೋನ್ ಮಾಡಿದ್ದೂ, ಆತ ಫೋನ್ ತೆಗೆಯದ ಕಾರಣ ಕೂಡಲೇ ಮನೆಗೆ ಹೋಗಿ ಬಾಗಿಲು ಬಡಿದಿದ್ದಾನೆ. ಬೆಡ್‌ರೂಮಿನ ಬಾಗಿಲು ಬಡಿದರೂ ಬಾಗಿಲು ತೆರೆಯದ ಕಾರಣ ಕಿಟಿಕಿಯಿಂದ ನೋಡಿದಾಗ ಫ್ಯಾನ್‌ಹುಕ್‌ಗೆ ಶಾಲಿನಿಂದ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಬೆಡ್‌ರೂಮಿನ ಬಾಗಿಲು ಒಡೆದು ಅನೀಶ್‌ನನ್ನು ಬೈಲೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಆತನು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣವೇನೆಂಬುದು ಇನ್ನು ತಿಳಿದುಬಂದಿಲ್ಲ. ಈ ಸಂಬಂಧ ಅನೀಶ್ ತಂದೆ ಸದಾಶಿವ ದೂರಿನ ಆಧಾರದ ಮೇಲೆ ಕಾರ್ಕಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.