- Advertisement -
- Advertisement -
ಉಡುಪಿ : ಕಾರ್ಕಳದ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿ ಅಲ್ತಾಫ್ ಗೆ ಜಾಮೀನು ಮಂಜೂರಾಗಿದೆ. ಉಡುಪಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.
ಕಾರ್ಕಳದ ಪಳ್ಳಿಯ ರಂಗನಪಲ್ಕೆ ಸಮೀಪ ಕಾಡಿನಲ್ಲಿ ಆಗಸ್ಟ್ ನಲ್ಲಿ ನಡೆದ ಗ್ಯಾಂಗ್‌ರೇಪ್ ಕೇಸಿನಲ್ಲಿ ಅಲ್ತಾಫ್ ಎ 1 ಆರೋಪಿಯಾಗಿದ್ದ. ಅಲ್ತಾಫ್ ಪರವಾಗಿ ಕಾರ್ಕಳದ ವಕೀಲ ರವಿಶಂಕರ್ ಬಿ.ಎಂ. ವಾದಿಸಿದ್ದರು.
ಕುಕ್ಕುಂದೂರು ಅಯ್ಯಪ್ಪ ನಗರದ ಗರಡಿ ಸಮೀಪದ 21 ವರ್ಷದ ಯುವತಿಯನ್ನು ಪರಿಚಿತನೇ ಆಗಿದ್ದ ಟಿಪ್ಪರ್ ಚಾಲಕ ಅಲ್ತಾಫ್ ಕಾರಿನಲ್ಲಿ ಕರೆದುಕೊಂಡು ಹೋಗಿ ಇಬ್ಬರು ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದ.
ಪ್ರಕರಣದಲ್ಲಿ ಡ್ರಗ್ಸ್ ದಂಧೆಯ ಕರಾಳ ಮುಖ ಅನಾವರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆದಿದ್ದವು. ಇದೀಗ ಆರೋಪಿ ಅಲ್ತಾಫ್ ಗೆ ಜಾಮೀನು ಮಂಜೂರಾಗಿದೆ.
- Advertisement -