- Advertisement -
- Advertisement -
ವಿಟ್ಲ: ಕನ್ಯಾನದಲ್ಲಿ ಜ್ವರ ಕಾಣಿಸಿಕೊಂಡ ವ್ಯಕ್ತಿಯೊಬ್ಬರನ್ನು ವಿಶೇಷ ತಂಡ ಆಗಮಿಸಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 33 ವರ್ಷದ ವ್ಯಕ್ತಿಯೊಬ್ಬರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಸರಕಾರಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಬೆಂಗಳೂರಿಂದ ತಿಂಗಳ ಹಿಂದೆ ಬಂದಿದ್ದಾರೆನ್ನಲಾಗಿದ್ದು, ಮುನ್ನೆಚ್ಚರಿಕೆಯ ದೃಷ್ಠಿಯಿಂದ ಮಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ.
ಕರೋಪಾಡಿ ಭಾಗದಿಂದ ಉಸಿರಾಟದ ತೊಂದರೆಯ ಹಿನ್ನಲೆಯಲ್ಲಿ ಬುಧವಾರ ಬಂಟ್ವಾಳ ಆಸ್ಪತ್ರೆಗೆ ಕರೆದುಕೊಂಡು ಹೋದ 50 ವರ್ಷದ ಮಹಿಳೆಯ ಆರೋಗ್ಯದ ಚೇತರಿಕೆಯಾಗಿದ್ದು, ಮಾಹಿತಿ ತಿಳಿದುಬಂದಿದೆ.
- Advertisement -