Wednesday, June 26, 2024
Homeಕರಾವಳಿಕಣಿಯೂರು: ಮಲೆಂಗಲ್ಲು ದೇವಾಲಯದಲ್ಲಿ ರಾಮಮಂದಿರ ಶಿಲಾನ್ಯಾಸ ಕುರಿತು ವಿಶೇಷ ಪೂಜೆ, ಕರಸೇವಕರಿಗೆ ಗೌರವ

ಕಣಿಯೂರು: ಮಲೆಂಗಲ್ಲು ದೇವಾಲಯದಲ್ಲಿ ರಾಮಮಂದಿರ ಶಿಲಾನ್ಯಾಸ ಕುರಿತು ವಿಶೇಷ ಪೂಜೆ, ಕರಸೇವಕರಿಗೆ ಗೌರವ

spot_img
- Advertisement -
- Advertisement -

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಶದಾದ್ಯಂತ ಪೂಜೆ, ಪುನಸ್ಕಾರ, ಪ್ರಾರ್ಥನೆಗಳು ನಡೆಯುತ್ತಿದೆ.

ಈ ಹಿನ್ನಲೆಯಲ್ಲಿ ಬಿಜೆಪಿ ಕಣಿಯೂರು ಮಹಾಶಕ್ತಿಕೇಂದ್ರ ವತಿಯಿಂದ ಅಯೋಧ್ಯೆ ಶೀ ರಾಮ ಜನ್ಮ ಭೂಮಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಮತ್ತು ಮಂದಿರ ನಿರ್ಮಾಣ ಕಾರ್ಯ ಯಶಸ್ವಿಯಾಗಿ ನೆರವೇರಲಿ ಎಂದು ಕಣಿಯೂರು ಗ್ರಾಮದ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ದೀಪ ಬೆಳಗಿಸಿ ಶ್ರೀ ರಾಮ ನಾಮ ಜಪ ಮಾಡುವ ಮೂಲಕ ಪ್ರಾರ್ಥಿಸಲಾಯಿತು.

ಈ ಸಂದರ್ಭ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಯಶವಂತ್ ಗೌಡ, ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣ್ಣೆಕ್ಕರ, ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯತೀಶ್ ಶೆಟ್ಟಿ, ಯುವ ಮೋರ್ಚಾ ತಾಲೂಕು ಕಾರ್ಯಕಾರಿಣಿ ಸದಸ್ಯ ಪ್ರಸ್ತುತ ಜೈನ್, ಬೂತ್ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಗೌಡ ಉರುoಬುತ್ತಿಮಾರ್, ಅವಿನಾಶ್ ಮಲೆಂಗಲ್ಲು ಸೇರಿದಂತೆ ಕಣಿಯೂರು ಮತ್ತು ಪದ್ಮುಂಜದ ಯುವ ಕಾರ್ಯಕರ್ತರು ಭಾಗವಹಿಸಿದ್ದರು

ಕರಸೇವಕರಿಗೆ ಸನ್ಮಾನ:
ಈ ಸಮಯದಲ್ಲಿ ಗ್ರಾಮದಿಂದ ಅಯೋದ್ಯೆಗೆ ಕರಸೇವೆ ಮತ್ತು ಹೋರಾಟದಲ್ಲಿ ಭಾಗವಹಿಸಿದ್ದ ಹಿರಿಯರಿಗೆ ಗೌರವ ಸಲ್ಲಿಸಲಾಯಿತು.

- Advertisement -
spot_img

Latest News

error: Content is protected !!