Friday, June 5, 2026
Homeಕರಾವಳಿಕಡಬ: ಕೊರೋನದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸಿದ ಪಾಪ್ಯುಲರ್ ಫ್ರಂಟ್

ಕಡಬ: ಕೊರೋನದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸಿದ ಪಾಪ್ಯುಲರ್ ಫ್ರಂಟ್

- Advertisement -
- Advertisement -

ಕಡಬ: ಕೊರೋನಾ ಸೋಂಕಿನಿಂದ ಮೃತಪಟ್ಟ ಕಡಬ ತಾಲೂಕಿನ ಕೋಡಿಂಬಾಳದ ವ್ಯಕ್ತಿಯ ಮೃತದೇಹದ ದಫನ ಕಾರ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಸರಕಾರದ ನಿಯಮಾವಳಿ ಮತ್ತು ಮುಂಜಾಗೃತಾ ಕ್ರಮವನ್ನನುಸರಿಸಿ ಅಂತ್ಯ ಸಂಸ್ಕಾರವನ್ನು ನೆರವೇರಿಸಿದರು.

ನಿಸಾರ್ ಕುದ್ರಡ್ಕ ನೇತೃತ್ವದ ಪಾಪ್ಯುಲರ್ ಫ್ರಂಟ್ ತಂಡದ ಸಹಕಾರದಿಂದ ಮಯ್ಯತ್ ಪರಿಪಾಲನೆಯ ವಿಧಿ ವಿಧಾನಗಳನ್ನು ನೆರವೇರಿಸಿದರು. ಅಂತ್ಯಕ್ರಿಯೆಯ ಸಂಪೂರ್ಣ ಉಸ್ತುವಾರಿಯನ್ನು ಸಾದಿಕ್ ಅತ್ತಾಜೆ ವಹಿಸಿಕೊಂಡಿದ್ದರು. ಕೋಡಿಂಬಾಳ ಜಮಾಅತ್ ಆಡಳಿತ ಪದಾಧಿಕಾರಿಗಳು ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದರು.

- Advertisement -

Latest News

error: Content is protected !!