Thursday, May 16, 2024
Homeಕರಾವಳಿ36 ಗಂಟೆಗಳಲ್ಲಿ ಕಿಡ್ನ್ಯಾಪ್ ಪ್ರಕರಣ ಬೇಧಿಸಿದ ಪೊಲೀಸರು: ಪೊಲೀಸರ ಕಾರ್ಯಕ್ಕೆ ಹರಿದು ಬಂತು ಅಭಿನಂದನೆಯ ಮಹಾಪೂರ

36 ಗಂಟೆಗಳಲ್ಲಿ ಕಿಡ್ನ್ಯಾಪ್ ಪ್ರಕರಣ ಬೇಧಿಸಿದ ಪೊಲೀಸರು: ಪೊಲೀಸರ ಕಾರ್ಯಕ್ಕೆ ಹರಿದು ಬಂತು ಅಭಿನಂದನೆಯ ಮಹಾಪೂರ

spot_img
- Advertisement -
- Advertisement -

ಬೆಳ್ತಂಗಡಿ: ಉಜಿರೆಯ 8 ವರ್ಷದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ನಿನ್ನೆ ರಾತ್ರಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನಹೂಸಹಳ್ಳಿ ಬಳಿ ಬಾಲಕ ಅನುಭವ್ ನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಕೂರ್ನಹಳ್ಳಿಯ ಮಂಜುನಾಥ್ ಮತ್ತು ಮಹೇಶ ಅವರ ಮನೆಯಲ್ಲಿ ಕಿಡ್ನಾಪರ್ ಗಳು ಬಾಲಕನನ್ನು ಇರಿಸಿದ್ದರು. ಮೊಬೈಲ್ ನೆಟ್ವರ್ಕ್ ಆಧರಿಸಿ ಕಾರ್ಯಾಚರಣೆ ಮಾಡಿದ ಪೊಲೀಸರು ಮಂಡ್ಯದ ಗಂಗಾಧರ, ಬೆಂಗಳೂರಿನ ಕೋಮಲ್ ಸೇರಿದಂತೆ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.

ಇನ್ನು ಪ್ರಕರಣವನ್ನು ಕೇವಲ 36 ಗಂಟೆಗಳಲ್ಲಿ ಬೇಧಿಸಿರುವ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಪಿ.ಜಿ.ಸಂದೇಶ್ ಹಾಗೂ ತಂಡಕ್ಕೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಅಲ್ಅಲದೇ ಕೋಲಾರ ಪೊಲೀಸರ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಇನ್ನು ಬಾಲಕ ಸುರಕ್ಷಿತವಾಗಿರಲಿ ಅಂತಾ ಜನ ಕೂಡ ಪ್ರಾರ್ಥಿಸುತ್ತಿದ್ದರು. ಇದೀಗ ಪೊಲೀಸರು ಆತನನ್ನು ರಕ್ಷಣೆ ಮಾಡಿರೋದಕ್ಕೆ ಜನ ಕೂಡ ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!