Sunday, May 5, 2024
Homeಕರಾವಳಿಬೆಳ್ತಂಗಡಿ : ವಾಟ್ಸಾಪ್ ಸ್ಟೇಟಸ್ ಹಾಕಿದ ವಿಚಾರದಲ್ಲಿ ಜಾತಿ ನಿಂದನೆ, ಹಲ್ಲೆ ಪ್ರಕರಣ: ರಂಜಿತ್ ಮದ್ದಡ್ಕ...

ಬೆಳ್ತಂಗಡಿ : ವಾಟ್ಸಾಪ್ ಸ್ಟೇಟಸ್ ಹಾಕಿದ ವಿಚಾರದಲ್ಲಿ ಜಾತಿ ನಿಂದನೆ, ಹಲ್ಲೆ ಪ್ರಕರಣ: ರಂಜಿತ್ ಮದ್ದಡ್ಕ ಮತ್ತು ಉಮೇಶ್ ಕುಲಾಲ್ ಗೆ ನ್ಯಾಯಾಂಗ ಬಂಧನ.

spot_img
- Advertisement -
- Advertisement -

ಬೆಳ್ತಂಗಡಿ: ವಾಟ್ಸಾಪ್ ಸ್ಟೇಟಸ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣದ ಆರೋಪಿಗಳ ಮಂಗಳೂರು ಜಿಲ್ಲಾ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ರಂಜಿತ್ ಮದ್ದಡ್ಕ(30) ಮತ್ತು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ಉಮೇಶ್ ಕುಲಾಲ್(35) ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ  ಮಂಗಳೂರು ಜಿಲ್ಲಾ ನ್ಯಾಯಾಲಯದ ಮುಂದೆ ಜೂನ್ 13 ರಂದು ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಬ್ಬರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು. ಇಬ್ಬರು ಆರೋಪಿಗಳನ್ನು ಮಂಗಳೂರು ಸಬ್ ಜೈಲಿಗೆ ಕಳುಹಿಸಲಾಗಿದೆ.

ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಬೆಳ್ತಂಗಡಿ ಕಸಬಾ ಗ್ರಾಮದ ರೆಂಕೆದಗುತ್ತು ಕೆಂಬರ್ಜೆಯ ಶೇಖರ ನಾಯ್ಕ ಎಂಬವರ ಪುತ್ರ ಯಶವಂತ ನಾಯ್ಕ (19ವ)ರವರು ನೀಡಿದ ದೂರಿನಂತೆ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ರಂಜಿತ್ ಮದಡ್ಕ ಮತ್ತಿತರರ ವಿರುದ್ಧ ಮೇ.29 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ  ಕಲಂ 504, 506, 323 ಜೊತೆಗೆ 34 ಐಪಿಸಿ ಮತ್ತು ಕಲಂ 3(1)(S) ಎಸ್.ಸಿ/ಎಸ್.ಟಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

- Advertisement -
spot_img

Latest News

error: Content is protected !!