Wednesday, June 3, 2026
Homeತಾಜಾ ಸುದ್ದಿಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ 2ನೇ ಅವಧಿಗೂ ಜೆ.ಪಿ ನಡ್ಡಾ ಮುಂದುವರಿಕೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ 2ನೇ ಅವಧಿಗೂ ಜೆ.ಪಿ ನಡ್ಡಾ ಮುಂದುವರಿಕೆ

- Advertisement -
- Advertisement -

ನವದೆಹಲಿ: ಬಿಜೆಪಿಯ  ರಾಷ್ಟ್ರೀಯ ಅಧ್ಯಕ್ಷರಾಗಿದ್ದ  ಜೆಪಿ ನಡ್ಡಾ ಅವಧಿ ಮುಗಿದ ಹಿನ್ನೆಲೆ ಮತ್ತೆ ಅವರ ಜಾಗಕ್ಕೆ ಹೊಸ ಅಧ್ಯಕ್ಷರು ಬರುತ್ತಾರೆ ಅಂತಾ ಹೇಳಲಾಗಿತ್ತು. ಆದರೆ ಈ ಸುದ್ದಿಗೆ ಈಗ ತೆರೆ ಎಳೆದಿರುವಂತ ಭಾರತೀಯ ಜನತಾ ಪಾರ್ಟಿ, ಜೆಪಿ ನಡ್ಡಾ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮುಂದುವರೆಸಿ ಆದೇಶಿಸಿದೆ.

ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವಂತ ಜೆ.ಪಿ ನಡ್ಡಾ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿತ್ತು. ಅವರ ಬದಲಾವಣೆ ನಡೆಯಲಿದೆ ಎನ್ನಲಾಗಿತ್ತು.

ಆದ್ರೇ ಇದೀಗ ಬಿಜೆಪಿಯಿಂದ ಈ ಊಹಾಪೋಹಕ್ಕೆ ತೆರೆ ಎಳೆಯಲಾಗಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ ನಡ್ಡಾ ಅವರನ್ನು 2ನೇ ಅವಧಿಗೆ ಮುಂದುವರೆಸಿ ಬಿಜೆಪಿ ಆದೇಶಿಸಿದೆ. ಈ ಮೂಲಕ ಮತ್ತೊಂದು ಅವಧಿಗೆ ಅವರನ್ನು ಮುಂದುವರಿಕೆ ಮಾಡಲಾಗಿದೆ.

- Advertisement -

Latest News

error: Content is protected !!