Tuesday, July 1, 2025
Homeಕರಾವಳಿಪುತ್ತೂರು: ಚಿನ್ನಾಭರಣ ಕಳ್ಳವು ಪ್ರಕರಣ: 9 ವರ್ಷ ಜೈಲು ಶಿಕ್ಷೆ ತೀರ್ಪು

ಪುತ್ತೂರು: ಚಿನ್ನಾಭರಣ ಕಳ್ಳವು ಪ್ರಕರಣ: 9 ವರ್ಷ ಜೈಲು ಶಿಕ್ಷೆ ತೀರ್ಪು

spot_img
- Advertisement -
- Advertisement -

ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮಹೇಂದ್ರಕುಮಾರ್ ಎಂಬುವವರ ಮನೆಯ ಬಾಗಿಲಿನ ಚಿಲಕವನ್ನು ಒಡೆದು ಕಳ್ಳರು ಒಳನುಗ್ಗಿ ಸೂಟ್‌ಕೇಸ್‌ನಲ್ಲಿದ್ದ 50.930 ಗ್ರಾಂ ತೂಕದ 43 ಸಾವಿರ ಮೌಲ್ಯದ ಚಿನ್ನಾಭರಣವನ್ನು 2006ರ ಮಾರ್ಚ್ 6ರಂದು ಕಳವು ಮಾಡಿದ್ದರು. ಈ ಕಳವು ಮಾಡಿದ್ದ ಇಬ್ಬರು ಕಳ್ಳರ ಪೈಕಿ ಒಬ್ಬನಿಗೆ ಇಲ್ಲಿನ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು.

ಜಿಲ್ಲಾ ಅಪರಾಧ ವಿಭಾಗದ ನಿರೀಕ್ಷಕ ತಿಲಕ್ ಚಂದ್ರ ಅವರು ಆರೋಪಿಗಳಾದ ಸಂತೋಷ್ ಮತ್ತು ನಾಗರಾಜ್ ಬಳೆಗಾರ್ ಎಂಬುವರನ್ನು ಬಂಧಿಸಿ, ವಶಪಡಿಸಿಕೊಂಡ ಬೆಲೆಬಾಳುವ ಸೊತ್ತುಗಳನ್ನು ಪುತ್ತೂರು ನಗರ ಪೊಲೀಸ್ ಠಾಣೆಗೆ ಜಮಾ ಮಾಡಿದ್ದರು. ಪುತ್ತೂರು ನಗರ ಠಾಣೆಯ ಅಂದಿನ ಅಪರಾಧ ವಿಭಾಗದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಸುರತ್ಕಲ್ ಹೊನ್ನಕಟ್ಟೆಯ ವಿದ್ಯಾನಗರ ನಿವಾಸಿ ನಾಗರಾಜ ಬಳೆಗಾರ್ (34) ಎಂಬಾತನ ವಿರುದ್ಧ ಸಿ.ಸಿ.ಸಂ.864/2014 ರಂತೆ ಪ್ರಕರಣದ ವಿಚಾರಣೆ ನಡೆದಿದ್ದು, ಇದೀಗ ಆತನಿಗೆ ಶಿಕ್ಷೆ ಪ್ರಕಟವಾಗಿದೆ.  ನಾಗರಾಜ್ ಅವರು ಐಪಿಸಿ ಸೆಕ್ಷನ್ 457 ರ ಅಡಿಯಲ್ಲಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5,000 ರೂ.  ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ತೀರ್ಪು ನೀಡಿದೆ.

ಅದೇ ರೀತಿ ಐಪಿಸಿ ಸೆಕ್ಷನ್ 380 ರ ಅಡಿಯಲ್ಲಿ ಇನ್ನೂ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 4,000 ರೂಪಾಯಿ ದಂಡ ತೆರಬೇಕಾಗುತ್ತದೆ.  ದಂಡ ಪಾವತಿಸಲು ತಪ್ಪಿದಲ್ಲಿ ಐದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.  ಆರೋಪಿ ಸದ್ಯ ಕಲಬುರ್ಗಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

- Advertisement -
spot_img

Latest News

error: Content is protected !!