Wednesday, May 8, 2024
Homeತಾಜಾ ಸುದ್ದಿಮತ್ತೆ ಜೆಡಿಎಸ್‌ – ಕಾಂಗ್ರೆಸ್‌ ಮೈತ್ರಿ? ಕಾಂಗ್ರೆಸ್‌ಗೆ ಓಪನ್‌ ಆಫರ್‌ ಕೊಟ್ಟ ಹೆಚ್‌ಡಿಕೆ

ಮತ್ತೆ ಜೆಡಿಎಸ್‌ – ಕಾಂಗ್ರೆಸ್‌ ಮೈತ್ರಿ? ಕಾಂಗ್ರೆಸ್‌ಗೆ ಓಪನ್‌ ಆಫರ್‌ ಕೊಟ್ಟ ಹೆಚ್‌ಡಿಕೆ

spot_img
- Advertisement -
- Advertisement -

ಮೈಸೂರು: ರಾಜ್ಯಸಭೆ ಚುನಾವಣೆಯಲ್ಲಿ ತಾವು ಅಂದುಕೊಂಡಂತೆ ನಡೆದರೆ ಮುಂದಿನ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಲು ದಳ ನಾಯಕರು ಮುಂದಾಗಿದ್ದಾರೆಯೇ? ಇಂತಹ ಮಾತುಗಳಿಗೆ ಕಾರಣ ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಓಪನ್ ಆಫರ್.

ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿಯವರು, ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ನಿವೃತ್ತಿಗೊಳಿಸುವ ಪ್ರಶ್ನೆಯೇ ಇಲ್ಲ. ನಮ್ಮ ಬಳಿ 32 ಮತಗಳಿವೆ, ಕಾಂಗ್ರೆಸ್ ಬಳಿ ನಮಗಿಂತ ಕಡಿಮೆ ಮತಗಳಿವೆ. ಕಾಂಗ್ರೆಸ್ ಗಿಂತ ಜೆಡಿಎಸ್ ಅಭ್ಯರ್ಥಿಗೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಬೇಕಿದ್ದರೇ ನಮ್ಮ ಪಕ್ಷದ ಎರಡನೇ ಪ್ರಾಶಸ್ಯದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡುತ್ತೇವೆ. ಕಾಂಗ್ರೆಸ್ ಪಕ್ಷದ ಎರಡನೇ ಪ್ರಾಶಸ್ಯದ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡಲಿ. ನನ್ನ ಮೊದಲನೇ ಅಜೆಂಡಾ ಇರುವುದು ಬಿಜೆಪಿ ಸೋಲಬೇಕೆನ್ನುವುದು. ಈ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್ ಜೊತೆ ಮಾತುಕತೆ ನಡೆಸಲು ಸಿದ್ಧನಿದ್ದೇನೆ ಎಂದು ಕಾಂಗ್ರೆಸ್ ಗೆ ಹೊಸ ಆಫರ್ ನೀಡಿದರು.

2023 ಚುನಾವಣೆ ವೇಳೆ ಕೈ- ತೆನೆ ಮೈತ್ರಿ ಬಗ್ಗೆ ಸುಳಿವು ನೀಡಿದ ಕುಮಾರಸ್ವಾಮಿ, ಸೆಕ್ಯೂಲರಿಸ ಉಳಿಸಬೇಕೆಂದರೆ ನೀವು ನಮ್ಮ ಜೊತೆ ಬನ್ನಿ. ಮುಂದೆ ನೀವು ಚುನಾವಣೆಯಲ್ಲಿ ಪಡೆಯುವುದು 70 ರಿಂದ 80 ಸ್ಥಾನ ಮಾತ್ರ. ಬಿಜೆಪಿ ದೂರ ಇಡಬೇಕೆಂಬ ಮನಸ್ಸಿದ್ದರೆ ನಮಗೆ ಸಹಕಾರ ಕೊಡಿ ಎಂದರು.

- Advertisement -
spot_img

Latest News

error: Content is protected !!