Saturday, May 4, 2024
Homeಕರಾವಳಿಮಂಗಳೂರು ನಗರದಲ್ಲಿ 5ನೇ ವರ್ಷದ ಹಲಸು ಹಬ್ಬ

ಮಂಗಳೂರು ನಗರದಲ್ಲಿ 5ನೇ ವರ್ಷದ ಹಲಸು ಹಬ್ಬ

spot_img
- Advertisement -
- Advertisement -

ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಮತ್ತು ಪ್ರಣವ ಸೌಹಾರ್ದ ಸಹಕಾರಿ ನಿಯಮಿತ ಇವರ ಸಂಯುಕ್ತ ಆಶ್ರಯದಲ್ಲಿ ಹಲಸು ಹಬ್ಬಮಂಗಳೂರಿನಲ್ಲಿ 5ನೇ ವರ್ಷದ ಹಲಸು ಹಬ್ಬ ಆರಂಭಗೊಂಡಿದೆ.


ಮಂಗಳೂರಿನ ಶರವು ದೇವಸ್ಥಾನದ ಬಳಿ ಇರುವ ಬಾಳಂ ಭಟ್ ಹಾಲ್‌ನಲ್ಲಿ ಎರಡು ದಿನಗಳ ಕಾಲ ನಡೆಯುವ ಈ ಹಲಸು ಹಬ್ಬಕ್ಕೆ ಹಾಸನದ ಕೃಷಿ ಸಾಧಕಿ ಹೇಮಾ ಅವರು ಹಲಸು ಹಣ್ಣನ್ನು ತುಂಡರಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಅದ್ಧೂರು ಕೃಷ್ಣರಾವ್, ಕಾರಂತ ಪೆರಾಜೆ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.

ಹಲಸು ಮೇಳದಲ್ಲಿ ವಿವಿಧ ಬಗೆಯ ಹಲಸು ಪ್ರದರ್ಶನ ಹಾಗೂ ಮಾರಾಟ, ವಿವಿಧ ಬಗೆಯ ಹಲಸಿನ ಖಾದ್ಯಗಳು, ಹಲಸಿನ ಹೋಲಿಗೆ,ಐಸ್ ಕ್ರೀಂ, ಹಲಸಿನ ಊಟ, ಚಿಗುರು ನರ್ಸರಿ ಮಂಗಳೂರು ಇವರಿಂದ ವಿವಿಧ ತಳಿಗಳ ಹಲಸು ಗಿಡಗಳ ಮಾರಾಟ, ಪ್ರದರ್ಶನ ನಡೆಯಿತು.


ಅಲ್ಲದೆ ಶಿರಸಿಯವರ ಓಜಸ್ ಅಡಿಕೆ ಮಾಲ್ಟ್ ಬಿಡುಗಡೆ ಮತ್ತು ಮಾರಾಟ, ಗೆಡ್ಡೆಗೆಣಸು, ವಿವಿಧ ತರಕಾರಿ ಸಸಿಗಳು ಹಾಗೂ ದೇಸಿ ತರಕಾರಿ ಬೀಜಗಳ ಮಾರಾಟ ಆಯೋಜನೆ ಇತ್ತು. ವಿವಿಧ ಬಗೆಯ ಹಲಸಿನ ತಳಿಗಳ ಜೊತೆಗೆ, ಹಲಸಿನ ಹಣ್ಣಿನಿಂದ ತಯಾರಿಸಲಾಗುವ ಖಾದ್ಯಗಳನ್ನು ಕೂಡಾ ಪ್ರದರ್ಶನ, ಮಾರಾಟಕ್ಕಿಡಲಾಗಿತ್ತು

- Advertisement -
spot_img

Latest News

error: Content is protected !!