Saturday, June 6, 2026
Homeಕರಾವಳಿರಾಜ್ಯ ಒಲಿಂಪಿಕ್ಸ್‌ ಗೇಮ್ಸ್‌ನಲ್ಲಿ ಸುಳ್ಯದ ವೈಟ್ ಲೈಫ್ಟರ್ ಗಳಿಗೆ ಪ್ರಶಸ್ತಿ

ರಾಜ್ಯ ಒಲಿಂಪಿಕ್ಸ್‌ ಗೇಮ್ಸ್‌ನಲ್ಲಿ ಸುಳ್ಯದ ವೈಟ್ ಲೈಫ್ಟರ್ ಗಳಿಗೆ ಪ್ರಶಸ್ತಿ

- Advertisement -
- Advertisement -

ಸುಳ್ಯ: ಮೇ.16ರಿಂದ ಮೇ.20ರ ವರೆಗೆ ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ವೈಟ್ ಲಿಫ್ಟಿಂಗ್ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲೆಯ ಎಂಟನೇ ತರಗತಿಯ ದಕ್ಷ ಆರ್.ಶೆಟ್ಟಿಯವರು 45 ಕಿ.ಗ್ರಾಂ. ವಿಭಾಗದಲ್ಲಿ ಹಾಗೂ ಅದೇ ಶಾಲೆಯ ತರಗತಿಯ ಎಂಟನೇ ತರಗತಿಯ ದೀಪ್ತಿ ಎಂ.ವಿ.ಇವರು 59 ಕಿ.ಗ್ರಾಂ.ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಶ್ರೀ ಶಾರದ ಹೆಣ್ಮಕ್ಕಳ ಪ್ರೌಢಶಾಲೆಯ ಎಂಟನೇ ತರಗತಿಯ ಶ್ರೇಯಾರವರು 49 ಕಿ.ಗ್ರಾಂ.ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.


ಅಲ್ಲದೆ ಬಾಲಕರ ವಿಭಾಗದಲ್ಲಿ ಕೆವಿಜಿ ಐಪಿಎಸ್ ನ ಎಂಟನೇ ತರಗತಿಯ ಗಾಯಕ್ ಬಿ., ಸುಳ್ಯದ ಸರಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲೆ ಯ ಹತ್ತನೇ ತರಗತಿಯ ಕಾರ್ತಿಕ್, ಸರಕಾರಿ ಪ್ರೌಢಶಾಲೆ ಆಲೆಟ್ಟಿಯ ಒಂಭತ್ತನೇ ತರಗತಿಯ ವಿಜೇಶ್ ಕೆ.,ಸುಳ್ಯದ ಸೈಂಟ್ ಬ್ರಿಜಿಡ್ಸ್ ಹೈಯರ್ ಪ್ರೈಮರಿ ಶಾಲೆಯ ಐದನೇ ತರಗತಿಯ ಆರ್. ಸಂತೋಷ್ ರವರು 49ರಿಂದ 55ಕಿ. ಗ್ರಾಂ. ವಿಭಾಗದಲ್ಲಿ ಸ್ಪರ್ಧಿಸಿ ಉತ್ತಮ ನಿರ್ವಹಣೆಗೆ ಪ್ರಶಸ್ತಿ ಪತ್ರ ಪಡೆದಿದ್ದಾರೆ.


ಇವರು ಮಾಜಿ ರಾಷ್ಟ್ರೀಯ ಚಾಂಪಿಯನ್ ವೆಯ್ದ ಲಿಪ್ಟರ್ ಎ. ರಮೇಶ್ ರವರಿಂದ ತರಬೇತಿ ಪಡೆದಿರುತ್ತಾರೆ.ಶ್ರೀ ಶಾರದಾ ವುಮೆನ್ಸ್ ಕಾಲೇಜಿನ ತೃತೀಯ ಬಿ.ಕಾಂ.ನ ರಕ್ಷಾ ಕೆ.ಆರ್‌. ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.

- Advertisement -

Latest News

error: Content is protected !!