Saturday, June 28, 2025
Homeಉದ್ಯಮಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಅವಧಿ ನ.30 ರ ವರೆಗೆ ವಿಸ್ತರಣೆ

ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಅವಧಿ ನ.30 ರ ವರೆಗೆ ವಿಸ್ತರಣೆ

spot_img
- Advertisement -
- Advertisement -

ನವದೆಹಲಿ: ದೇಶದಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಸಾರ್ವಜನಿಕರು ಆರ್ಥಿಕವಾಗಿ ಕಂಗೆಟ್ಟು ಹೋಗಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್‌ ಡೌನ್‌ ಜಾರಿಗೊಳಿಸಿದ್ದ ಪರಿಣಾಮ ವಹಿವಾಟಿಲ್ಲದೆ ಜನತೆ ಪರಿತಪಿಸಿದ್ದರು.

ಈಗ ಲಾಕ್‌ ಡೌನ್‌ ಸಡಿಲಿಕೆ ಮಾಡಿ ವ್ಯಾಪಾರ – ವಹಿವಾಟಿಗೆ ಅನುವು ಮಾಡಿಕೊಟ್ಟಿದ್ದರೂ ಆರ್ಥಿಕ ಚಟುವಟಿಕೆ ಮಂದಗತಿಯಲ್ಲಿ ಸಾಗಿದೆ. ಇದರ ಮಧ್ಯೆ ಮುಗಿಲು ಮುಟ್ಟಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಿಂದಾಗಿ ದೈನಂದಿನ ವಸ್ತುಗಳ ಬೆಲೆಯೂ ಏರಿಕೆಯಾಗಿದೆ.

ಇದೀಗ ಆದಾಯ ತೆರಿಗೆ ಇಲಾಖೆ ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ತೆರಿಗೆದಾರರಿಗೆ ಕೊಂಚ ನೆಮ್ಮದಿಯ ಸುದ್ದಿ ನೀಡಿದೆ. 2019-20 ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವ ಅವಧಿಯನ್ನು ನವೆಂಬರ್‌ 30, 2020 ರ ವರೆಗೆ ವಿಸ್ತರಿಸಲಾಗಿದೆ.

- Advertisement -
spot_img

Latest News

error: Content is protected !!