Wednesday, June 26, 2024
Homeತಾಜಾ ಸುದ್ದಿಗಣರಾಜ್ಯೋತ್ಸವ ಪರೇಡ್‌ನಲ್ಲಿ ಶ್ರೀ ನಾರಾಯಣ ಗುರುಗಳ ಹೆಸರನ್ನು ಮುಂದಿಟ್ಟುಕೊಂಡು ಅನಾವಶ್ಯಕ ವಿವಾದ ಹುಟ್ಟು ಸೃಷ್ಠಿಸುವುದು ಸರಿಯಲ್ಲ:...

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಶ್ರೀ ನಾರಾಯಣ ಗುರುಗಳ ಹೆಸರನ್ನು ಮುಂದಿಟ್ಟುಕೊಂಡು ಅನಾವಶ್ಯಕ ವಿವಾದ ಹುಟ್ಟು ಸೃಷ್ಠಿಸುವುದು ಸರಿಯಲ್ಲ: ವಿ.ಸುನೀಲ್‌ಕುಮಾರ್

spot_img
- Advertisement -
- Advertisement -

ಕಾರ್ಕಳ: ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಶ್ರೀ ನಾರಾಯಣ ಗುರುಗಳ ಹೆಸರನ್ನು ಮುಂದಿಟ್ಟುಕೊಂಡು ಅನಾವಶ್ಯಕ ವಿವಾದ ಹುಟ್ಟು ಸೃಷ್ಠಿಸುವುದು ಸರಿಯಲ್ಲವೆಂದು ಇಂಧನ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್‌ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತೀ ವರ್ಷ ಜನವರಿ 26 ರ ಗಣರಾಜ್ಯೋತ್ಸವದಂದು ಘನವೆತ್ತ ಭಾರತ ಸರ್ಕಾರದಿಂದ ಪ್ರತೀ ವರ್ಷ ಗಣರಾಜ್ಯೋತ್ಸವ ಪರೇಡ್ ಆರಂಭದಿಂದ ಈವರೆಗೆ ತನ್ನದೇ ಆದಂತಹ ನಿಲುವನ್ನು ಇಟ್ಟುಕೊಂಡು ಪರೇಡ್ ನಡೆಯುತ್ತ ಬಂದಿದೆ. ಈವರೆಗೆ ನಡೆದು ಬಂದ ಪದ್ಧತಿಯಂತೆ ದೇಶದಲ್ಲಿರುವ ಒಟ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ 36 ರಾಜ್ಯಗಳೆಂದು ಪರಿಗಣಿಸಿ ಪ್ರತಿ ರಾಜ್ಯವು ಗಣರಾಜ್ಯೋತ್ಸವ ನಿಮಿತ್ತ ಸ್ತಬ್ಧಚಿತ್ರಗಳನ್ನು ಗಣರಾಜ್ಯೋತ್ಸವ ಪರೇಡ್ ಗೆ ಕಳುಹಿಸುವುದು ಪದ್ಧತಿ ಇದೆ. ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡಿಗೆ 12 ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಅಂದರೆ 3 ವರ್ಷಕ್ಕೊಮ್ಮೆ ಪ್ರತಿ ರಾಜ್ಯಗಳಿಗೆ ಭಾಗವಹಿಸುವ ಅವಕಾಶವಿರುತ್ತದೆ.

36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇರುವ ನಮ್ಮ ದೇಶದಲ್ಲಿ ಪ್ರತಿ ರಾಜ್ಯವೂ ಪ್ರತಿವರ್ಷ ಪರೇಡ್‌ನಲ್ಲಿ ಭಾಗವಹಿಸುವ ಅವಕಾಶವಿರುವುದಿಲ್ಲ. ಇದು ನಮ್ಮ ದೇಶದಲ್ಲಿ ಗಣರಾಜ್ಯೋತ್ಸವ ಆರಂಭವಾದಾಗಿನಿಂದ ನಡೆದುಬಂದ ಸತ್ಸಂಪ್ರದಾಯ ಮತ್ತು ನಿಯಾಮವಳಿ ಆಗಿರುತ್ತದೆ. ಈ ಸಂಪ್ರದಾಯದಂತೆ 2018ಮತ್ತು 2021ರಲ್ಲಿ ಕೇರಳ ರಾಜ್ಯವು ತನ್ನ ಸ್ತಬ್ಧಚಿತ್ರಗಳೊಂದಿಗೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿತ್ತು.

ಈ ಪುನರಾವರ್ತಿತ ನಿಯಮದಂತೆ ಕಳೆದ ವರ್ಷಗಳಲ್ಲಿ ಭಾಗವಹಿಸಿದ ರಾಜ್ಯಗಳನ್ನು ಬಿಟ್ಟು ಉಳಿದ 12 ರಾಜ್ಯಗಳಲ್ಲಿ ಈ ವರ್ಷ ಭಾಗವಹಿಸುವ ಅವಕಾಶವಿರುತ್ತದೆ ವಿನಹ ಕಳೆದ ವರ್ಷ ಅಂದರೆ 2021ರಲ್ಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿರುವ ಕೇರಳ ರಾಜ್ಯಕ್ಕೆ ಈ ವರ್ಷ ನಿಯಾಮವಳಿಯಂತೆ ಅವಕಾಶವಿರುವುದಿಲ್ಲ. ಆದರೆ ಈ ನಿಯಮಾವಳಿ ತಿಳಿದಿದ್ದರೂ ಕೂಡ ಕೇರಳ ರಾಜ್ಯವು ನಾರಾಯಣ ಗುರುಗಳ ವಿಚಾರವನ್ನು ಮುಂದಿಟ್ಟುಕೊಂಡು ಅನಾವಶ್ಯಕ ವಿವಾದವನ್ನು ಹುಟ್ಟು ಹಾಕುತ್ತಿದೆ ಎಂದು ವಿ.ಸುನೀಲ್ ಕುಮಾರ್ ವಿವರಿಸಿದ್ದಾರೆ.

2021ರಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ್ದ ಕೇರಳ ರಾಜ್ಯಕ್ಕೆ ಇನ್ನೂ ಮೂರು ವರ್ಷ ಬಿಟ್ಟು ಅಂದರೆ 2004ರಲ್ಲಿ ನಿಯಮಾವಳಿ ಪ್ರಕಾರ ಮತ್ತೊಮ್ಮೆ ಅವಕಾಶ ಎಂಬುದಾಗಿ ತಿಳಿದಿದ್ದರೂ ಕೂಡ ಕೇರಳ ಸರ್ಕಾರ ಈ ವರ್ಷವು ಭಾಗವಹಿಸುವ ಅವಕಾಶ ಕೋರಿದ್ದು ನಡೆದು ಬಂದ ಸಂಪ್ರದಾಯ ನಿಯಮಾವಳಿಯಂತೆ ಕೇಂದ್ರ ಸರ್ಕಾರ ಈ ವರ್ಷ ಅವಕಾಶವಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ.

ಈ ಎಲ್ಲಾ ನಿಯಮಾವಳಿಗಳು ಗೊತ್ತಿರುವ ಕೇರಳ ರಾಜ್ಯವು ಶ್ರೀ ನಾರಾಯಣ ಗುರುಗಳ ವಿಚಾರವನ್ನು ಎಳೆದು ತಂದು ವಿವಾದವನ್ನು ಹುಟ್ಟು ಹಾಕುತ್ತಿರುವುದು ಶೋಭೆ ತರುವಂತದ್ದಲ್ಲ. ಕಮ್ಯುನಿಸ್ಟ್ ನಿಲುವು ಹೊಂದಿರುವ ಕೇರಳ ಸರಕಾರವು ಈ ಹಿಂದೆ ಹಿಂದೂ ದೇವಾಲಯಗಳ ಬಗ್ಗೆ ತೋರಿರುವ ನಿಲುವು ಹಿಂದೂ ಕಾರ್ಯಕರ್ತರ ನಿರಂತರ ಹತ್ಯೆಗಳು ಇಂತಹ ಹಲವಾರು ಹಿಂದೂ ವಿರೋಧಿ ನೀತಿಗಳಿಂದ ಕುಖ್ಯಾತಿ ಹೊಂದಿರುವ ಕಮ್ಯುನಿಸ್ಟರಿಂದ ಶ್ರೀ ನಾರಾಯಣ ಗುರುಗಳ ತತ್ವಾದರ್ಶವನ್ನು ನಾವು ಕಲಿಯಬೇಕಾಗಿಲ್ಲ. ನಾರಾಯಣ ಗುರುಗಳು ಎಲ್ಲರಿಗೂ ಪ್ರಾತಃ ಸ್ಮರಣೀಯರು ಹಾಗೂ ಪೂಜ್ಯಾನೀಯರು.

ಆರಂಭದಿಂದಲೂ ನಡೆದು ಬಂದಿರುವ ಸಂಪ್ರದಾಯ ಮತ್ತು ನಿಯಾಮವಳಿಯನ್ನು ತಿಳಿದುಕೊಂಡು ಕೇರಳ ಸರ್ಕಾರವು ವಿವಾದ ಮಾಡದೇ ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕೆಂದು ಇದೇ ಸಂದರ್ಭದಲ್ಲಿ ಸಚಿವ ವಿ.ಸುನೀಲ್‌ಕುಮಾರ್ ಕೇರಳ ಸರಕಾರವನ್ನು ಆಗ್ರಹಿದ್ದಾರೆ.

- Advertisement -
spot_img

Latest News

error: Content is protected !!