ಬೆಂಗಳೂರು: ಹುಲಿ ಉಗುರು ಧರಿಸಿದ್ದ ಪ್ರಕರಣ ಸಂಬಂಧ ಬಂಧನಕ್ಕೀಡಾಗಿದ್ದ ‘ಬಿಗ್ ಬಾಸ್ ಸ್ಪರ್ಧಿ ‘ ವರ್ತೂರು ಸಂತೋಷ್ ನಿನ್ನೆ ಪರಪ್ಪನ ಅಗ್ರಹಾರದಿಂದ ರಿಲೀಸ್ ಆಗಿದ್ದಾರೆ.
ನಿನ್ನೆ ರಾತ್ರಿ ಜೈಲಿನಿಂದ ಬಿಡುಗಡೆಯಾದ ವರ್ತೂರು ಸಂತೋಷ್ ಅವರನ್ನು ಅವರ ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡರು. ಈ ವೇಳೆ ಅವರು ಯಾವುದೇ ಮಾತನ್ನೂ ಕೂಡ ಆಡದೇ ತಮ್ಮ ಪಾಡಿಗೆ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಈ ನಡುವೆ ಜೈಲಿನ ಅವರಣದಲ್ಲಿ ಖಾಸಗಿ ವಾಹಿನಿಗೆ ಸೇರಿದ್ದ ಕಾರೊಂದು ಕೂಡ ಪತ್ತೆಯಾಗಿತ್ತು, ಇದರ ಬೆನ್ನಲೇ ಅವರು ಮತ್ತೆ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು. ಇದರ ಬೆನ್ನಲೇ ಅವರು ಮತ್ತೆ ಇಂದು ಜೈಲಿನಿಂದ ಸೀದಾ ಅವರು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಮನೆಗೆ ಸಂತೋಷ್ ಹೋಗುವ ಮುನ್ನ ಅವರಿಗೆ ವೈದ್ಯಕೀಯ ತಪಾಸಣೆ ಮಾಡಲಿದ್ದು ವರದಿ ಬಂದ ನಂತರವೇ ಅವರನ್ನು ಬಿಗ್ ಬಾಸ್ ಮನೆಗೆ ಹೋಗ್ತಾರೆ ಎನ್ನಲಾಗುತ್ತಿದೆ. ಆದರೆ ಈ ಎಲ್ಲಾ ಗುಸುಗುಸು ಸುದ್ದಿಗಳಿಗೆ ಇಂದು ಉತ್ತರ ಸಿಗಲಿದೆ.