ಬೆಳ್ತಂಗಡಿ : ಸರಕಾರಿ ಅಧಿಕಾರಿಗಳಿಗೆ ಸರಕಾರ ಒಂದು ರೂಲ್ಸ್ ಮಾಡಿರುತ್ತದೆ ಆದ್ರೆ ಇದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಕೆಲವು ವೈದ್ಯರಿಗೆ ಅನ್ವಯಿಸುವುದಿಲ್ಲ ಇನ್ನೊಂದೆಡೆ ವೈದ್ಯರು ಯಾವಾಗ ಬರುತ್ತಾರೆ ಎಂದು ಬೆಳಗ್ಗೆ 9 ಗಂಟೆಯಿಂದ ಗರ್ಭಿಣಿ ಮಹಿಳೆಯರು ಬಾಗಿಲು ಮುಂದೆ ಸಾಲುಗಟ್ಟು ನಿಂತಿರುವ ದೃಶ್ಯ ನೋಡಿದ್ರೆ ಒಮ್ಮೆ ಕರುಳುಹಿಂಡಿ ಬರುವಂತಿದೆ.

ಪ್ರಸೂತಿ ಮತ್ತು ಸ್ರ್ತೀ ರೋಗ ತಜ್ಞರ ರೂಂ ಖಾಲಿ : ಅನೇಕ ತುಂಬು ಗರ್ಭಿಣಿ ಮಹಿಳೆಯರು ಸರಕಾರಿ ಆಸ್ಪತ್ರೆಗೆ ಬರುತ್ತಾರೆ ಅವರಿಗೆ ನಂಬರ್ 16 ರಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಜಾಗದಲ್ಲಿ ಡಾ.ರಶ್ಮಿ ಅವರು ಸೇವೆ ಸಲ್ಲಿಸುತ್ತಿದ್ದು ಇವರು ರೋಗಿಗಳಿಗೆ ಬೆಳಗ್ಗೆ 10 ಗಂಟೆಗೆ ಬರಲು ಸೂಚಿಸುತ್ತಾರೆ ಆದ್ರೆ ಡಾಕ್ಟರ್ ರಶ್ಮಿ ಅವರು ಮಾತ್ರ ಅವರ ಟೈಮ್ ಗೆ ಅಂದ್ರೆ 10:30 ನಂತರವೇ ಬರೋದು. ಗುರುವಾರ ಡಾ.ರಶ್ಮಿ ಅವರು 10:43 ಕ್ಕೆ ತಮ್ಮ ಕೊಠಡಿಯೊಳಗೆ ಬಂದಿದ್ದಾರೆ, ಹೊರಗಡೆ 15 ಕ್ಕೂ ಮಿಕ್ಕಿ ಗರ್ಭಿಣಿ ಮಹಿಳೆಯರು ಹಾಗೂ ರೋಗಿಗಳು ಕಾದು ಕಾದು ಸುಸ್ತು ಅಗಿದ್ರು.


ಸ್ಕ್ಯಾನಿಂಗ್ ರೂಂ ಖಾಲಿ : ಪಕ್ಕದ ಕೊಠಡಿಯಲ್ಲಿವುದು ಸ್ಕ್ಯಾನಿಂಗ್ ಕೊಠಡಿ ಸಂಖ್ಯೆ 11 ರಲ್ಲಿ ಕೂಡ ಅಷ್ಟೆ ಡಾಕ್ಟರ್ 10:30 ರ ನಂತರ ಪ್ರತಿನಿತ್ಯ ಡ್ಯೂಟಿಗೆ ಹಾಜರಾಗುತ್ತಾರೆ. ಈ ಬಗ್ಗೆ ಆಸ್ಪತ್ರೆಯ ಕೌಂಟರ್ ನಲ್ಲಿ ವಿಚಾರಿಸಿದಾಗ ಅವರು ಮಂಗಳೂರಿನಿಂದ ಬರುವುದು ಅದಕ್ಕೆ ತಡವಾಗುತ್ತದೆ ಅಂತ ಉಡಾಫೆಯ ಉತ್ತರ ನೀಡುತ್ತಾರೆ.

ಸಮಯಕ್ಕೆ ಸರಿಯಾಗಿ ಡಾಕ್ಟರ್ ಗಳು ಇಲ್ಲದೆ ಇರುವ ಬಗ್ಗೆ ಜಿಪಿಎಸ್ ಫೋಟೋ ಕೂಡ ತೆಗೆಯಲಾಗಿದೆ, ಅದರಲ್ಲಿ ಯಾವ ಸಮಯಕ್ಕೆ ಗರ್ಭಿಣಿ ಮಹಿಳೆಯರು ಸಾಲುಗಟ್ಟಿ ನಿಂತು ಪರದಾಡುತ್ತಿರುವುದು ಮತ್ತು ಸ್ಕ್ಯಾನಿಂಗ್ ಗೆ ಕ್ಯೂ ನಿಂತಿರುವುದು ಹಾಗೂ ಡಾಕ್ಟರ್ ಕುರ್ಚಿ ಖಾಲಿ ಇರುವ ಫೋಟೊ ಲಭ್ಯವಾಗಿದೆ.

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಬಗ್ಗೆ ಹಲವು ಆರೋಪಗಳು ಈ ಹಿಂದೆ ಕೂಡ ಕೇಳಿ ಬಂದಿತ್ತು ಇದನ್ನು ರಕ್ಷಾ ಕಮಿಟಿ ಸದಸ್ಯರು ಹಾಗೂ ಶಾಸಕರು ಕ್ರಮ ಕೈಗೊಂಡಿದ್ದರು ಇದೀಗ ವೈದ್ಯರು ಸಮಯಕ್ಕೆ ಸರಿಯಾಗಿ ಬಾರದೆ ರೋಗಿಗಳನ್ನು ಕಾಯಿಸುತ್ತಿರುವ ಬಗ್ಗೆ ಸರಕಾರಿ ಆಸ್ಪತ್ರೆಯ ರಕ್ಷಾ ಕಮಿಟಿ ಸದಸ್ಯರು ಹಾಗೂ ಬೆಳ್ತಂಗಡಿ ಶಾಸಕರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.