Friday, May 17, 2024
Homeತಾಜಾ ಸುದ್ದಿಗಂಡನ ಮನೆಯವರಿಂದ ನಿತ್ಯ ವರದಕ್ಷಿಣೆ ಕಿರುಕುಳ: ಪೊಲೀಸ್‌ ಠಾಣೆ ಮೆಟ್ಟಿಲೇರಿದ ರಾಜ್ಯದ ಹೆಸರಾಂತ ಐಪಿಎಸ್‌ ಅಧಿಕಾರಿ

ಗಂಡನ ಮನೆಯವರಿಂದ ನಿತ್ಯ ವರದಕ್ಷಿಣೆ ಕಿರುಕುಳ: ಪೊಲೀಸ್‌ ಠಾಣೆ ಮೆಟ್ಟಿಲೇರಿದ ರಾಜ್ಯದ ಹೆಸರಾಂತ ಐಪಿಎಸ್‌ ಅಧಿಕಾರಿ

spot_img
- Advertisement -
- Advertisement -

ಬೆಂಗಳೂರು: ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌) ಅಧಿಕಾರಿ ನಿತೀನ್‌ ಸುಭಾಶ್‌ ಯೆಲೋ ಅವರ ಕುಟುಂಬದ ವಿರುದ್ಧ ಅವರ ಪತ್ನಿ ಐಪಿಎಸ್‌ ಅಧಿಕಾರಿ ಎಸ್‌ಪಿ ವರ್ತಿಕಾ ಕಟಿಯಾರ್‌ ತಿರುಗಿಬಿದ್ದಿದ್ದಾರೆ. ಪತಿ ನಿತೀನ್‌ ಸುಭಾಶ್ ಸೇರಿದಂತೆ ಅವರ ಕುಟುಂಬದ 7 ಮಂದಿ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಲಾಗಿದೆ.

ಈ ಕುರಿತು ನಗರದ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ನಿತೀನ್‌ ಸುಭಾಶ್‌, ಅವರ ತಾಯಿ, ಸಹೋದರ, ಸೇರಿ ಕುಟುಂಬಸ್ಥರು ನಿರಂತರವಾಗಿ ವರದಕ್ಷಿಣೆ ಕಿರುಕುಳ, ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವರ್ತಿಕಾ ದೂರಿನಲ್ಲಿ ಆರೋಪಿಸಿದ್ದಾರೆ.

ಧಾರವಾಡ ಜಿಲ್ಲಾ ಎಸ್.ಪಿ ಯಾಗಿದ್ದಾಗ

ಕೊಲಂಬೋ ಸಹಿತ ವಿವಿಧ ದೇಶಗಳ ರಾಯಭಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಿರುವ 2009ರ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿ ನಿತೀಶ್‌ ಹಾಗೂ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್‌ 2011ರಲ್ಲಿ ಪ್ರೀತಿಸಿ ವಿವಾಹ ಆಗಿದ್ದರು. ಪ್ರಸ್ತುತ ಕೆಎಸ್‌ಆರ್‌ಪಿ ಸಂಶೋಧನ ಹಾಗೂ ತರಬೇತಿ ಕೇಂದ್ರದಲ್ಲಿ ಸೇವೆಯಲ್ಲಿರುವ ವರ್ತಿಕಾ ಅವರು 2010ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸ್ಪಿಯಾಗಿದ್ದರು.

ದೂರಿನಲ್ಲಿ ಏನಿದೆ?
ವರ್ತಿಕಾ ಕಟಿಯಾರ್ ರನ್ನು‌ 2011ರಲ್ಲಿ ಮದುವೆಯಾದ ಮಹಾರಾಷ್ಟ್ರದ ನಾಸಿಕ್ ಮೂಲದ ನಿತೀಶ್‌ ಸಾಕಷ್ಟು ವರದಕ್ಷಿಣೆಯನ್ನು ಪಡೆದಿದ್ದರು. ಮದುವೆಯಾದ ನಂತರವೂ ಹೆಚ್ಚಿನ ವರದಕ್ಷಿಣೆ ತರವಂತೆ ಪೀಡಿಸುತ್ತಾ ನಿತ್ಯ ಅಮಲು ಪದಾರ್ಥಗಳನ್ನು ಸೇವಿಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದಾರೆ. ಅದಕ್ಕೆ ಹೆದರಿ ಹಲವು ಬಾರಿ ಹಣ ನೀಡಿದ್ದೆ. ಇದಲ್ಲದೆ 2012ರಲ್ಲಿ ನನ್ನ ಅಜ್ಜಿಯ ಬಳಿ ನಿತೀಶ್‌ 5 ಲ.ರೂ. ಮೊತ್ತದ ಚೆಕ್‌ ಪಡೆದುಕೊಂಡಿದ್ದರು. 2016ರಲ್ಲಿ ಕೊಲಂಬೋಗೆ ತೆರಳಿದ್ದಾಗ ನಿತೀಶ್‌ ಹಲ್ಲೆ ನಡೆಸಿದ ಪರಿಣಾಮ ಕೈ ಮುರಿದಿತ್ತು. 2018ರ ದೀಪಾವಳಿ ಹಬ್ಬಕ್ಕೆ ಉಡುಗೊರೆಗಳನ್ನು ಕಳುಹಿಸಲಿಲ್ಲ ಎಂದು ಪತಿಯ ಕುಟುಂಬಸ್ಥರು ಜಗಳ ಮಾಡಿ ವಿಚ್ಛೇದನ ಕೊಡಿಸುವುದಾಗಿ ಬೆದರಿಸಿದ್ದರು. ಅಲ್ಲದೆ ಪತಿ ಹಾಗೂ ಅವರ ಮನೆಯವರು ಮನೆ ಖರೀದಿಸಲು 35 ಲ.ರೂ. ನೀಡುವಂತೆ ಹಲವು ಬಾರಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!