Tuesday, May 21, 2024
Homeತಾಜಾ ಸುದ್ದಿಸಾಂಸ್ಕೃತಿಕ ನಗರಿಯ ಜನರಿಗೆ ಕೂಡಿ ಬಂದ "ಯೋಗ": 15 ಸಾವಿರ ಯೋಗಪಟುಗಳ ಜೊತೆ ಪ್ರಧಾನಿ ನರೇಂದ್ರ...

ಸಾಂಸ್ಕೃತಿಕ ನಗರಿಯ ಜನರಿಗೆ ಕೂಡಿ ಬಂದ “ಯೋಗ”: 15 ಸಾವಿರ ಯೋಗಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಯೋಗಾಸನ

spot_img
- Advertisement -
- Advertisement -

ಮೈಸೂರು :ವಿಶ್ವ ಯೋಗ ದಿನದ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು. ಮಂಗಳವಾರ ಬೆಳಗ್ಗೆ 7 ಗಂಟೆಗೆ ಶುರುವಾದ ಪ್ರದರ್ಶನ 7.45ರವರೆಗು ನಡೆಯಿತು

ಪ್ರಧಾನಿ ಮೋದಿ ಅವರೊಂದಿಗೆ 15 ಸಾವಿರ ಜನ ಯೋಗ ಮಾಡಿದ್ರು. ಇದರಲ್ಲಿ 1200 ಶಾಲಾ ಮಕ್ಕಳು ಭಾಗವಹಿಸಿದ್ದಾರೆ. 45 ನಿಮಿಷ ನಡೆದ ಯೋಗ ಕಾರ್ಯಕ್ರಮದಲ್ಲಿ 19 ಆಸನಗಳು ಪ್ರದರ್ಶನವಾದವು. ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​, ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​, ಪ್ರಮೋದಾದೇವಿ ಒಡೆಯರ್​, ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್​, ಸಂಸದ ಪ್ರತಾಪ್​ ಸಿಂಹ ಸೇರಿದಂತೆ ಹಲವು ಗಣ್ಯರು ಮೋದಿ ಅವರ ಜತೆಗೆ ಯೋಗಮಾಡಿದ್ರು

- Advertisement -
spot_img

Latest News

error: Content is protected !!