Friday, May 17, 2024
Homeಕರಾವಳಿಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಫಿಲ್ಮ್ ಮೇಕಿಂಗ್ ಸ್ಪರ್ಧೆ ಹಾಗೂ ವಿಚಾರಸಂಕಿರಣ

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಫಿಲ್ಮ್ ಮೇಕಿಂಗ್ ಸ್ಪರ್ಧೆ ಹಾಗೂ ವಿಚಾರಸಂಕಿರಣ

spot_img
- Advertisement -
- Advertisement -

ಮಂಗಳೂರು; ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರಿನ ಪತ್ರಿಕೋದ್ಯಮ ಹಾಗೂ ದೃಶ್ಯ ಸಂವಹನ ವಿಭಾಗದ ವತಿಯಿಂದ ರಾಷ್ಟ್ರೀಯ ಮಟ್ಟದ ಫಿಲ್ಮ್ ಮೇಕಿಂಗ್ ಸ್ಪರ್ಧೆ ಹಾಗೂ ಸ್ಟೋರಿ ಆಫ್ ಸ್ಟೋರಿಟೆಲ್ಲಿಂಗ್ ವಿಷಯದ ಆಧಾರದ ಮೇಲೆ ವಿಚಾರಸಂಕಿರಣ ಶೂಟಿಂಗ್  ಸ್ಟಾರ್ಸ್ 2023 ಕಾಲೇಜಿನ ಎಲ್.ಎಫ್. ರಸ್ಕಿನ್ಹ ಸಭಾಂಗಣದಲ್ಲಿ ಮಾರ್ಚ್ 27 ರ ಸೋಮವಾರದಂದು ನಡೆಯಿತು.

ಸಮಾರಂಭವನ್ನು ನಿಲಿ ಹಕ್ಕಿ ಸಿನೆಮಾದ ನಿರ್ದೇಶಕ ಹಾಗೂ ವನ್ಯಜೀವಿ ಛಾಯಾಗ್ರಾಹಕ ಗಣೇಶ್ ಹೆಗ್ಡೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನೀಲಿ ಹಕ್ಕಿ ಸಿನೆಮಾವನ್ನು ಪ್ರದರ್ಶಿಸಲಾಯಿತು. ಕಥೆ ಹೇಳುವಿಕೆಯಲ್ಲಿನ ದೃಶ್ಯ ರೂಪಣಗಳು ಎಂಬ ವಿಷಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು ಸಿನೆಮಾದಲ್ಲಿ ಬರುವ ಹೆಚ್ಚಿನ ಕಥೆಗಳು ನಿಜವಲ್ಲ ಆದರೂ ಅವುಗಳನ್ನು ನಾವು ನಂಬುವಂತಿರುತ್ತವೆ. ಸಿನೆಮಾಗಳು ಮನೋರಂಜನೆಯನ್ನು ನೀಡುವ ಜೊತೆಗೆ ಪಾತ್ರಗಳು ಕಥಗೆ ಜೀವ ನೀಡುವಂತಿರುತ್ತದೆ. ಸಿನೆಮಾದೊಳಗಿನ ಕಥೆಯು ವೀಕ್ಷಕರಿಗೆ ತಲುಪುವುದು ಬಹಳ ಮುಖ್ಯವಾಗಿರುತ್ತದೆ ಎಂದರು.

ಇನ್ನೊರ್ವ ಸಂಪನ್ಮೂಲ ಅತಿಥಿಗಳಾಗಿ ಲೇಖನ, ವ್ಯವಹಾರ ಪರಿಣಿತ ಹಾಗೂ ಶಿಕ್ಷಣ ತಜ್ಞ ರಾಜೇಶ್ ಶ್ರೀವತ್ಸ ಮಾತನಾಡಿ, ಮಾರುಕಟ್ಟೆಯಲ್ಲಿ ನಮ್ಮ ಅಸ್ತಿತ್ವ ಕಾಪಾಡುವುದು ಬಹಳ ಮುಖ್ಯವಾಗಿರುತ್ತದೆ. ಚಿಕ್ಕ ಉದ್ದಿಮೆಯ ಮೂಲಕ ನಮ್ಮದೇ ಆದ ಬ್ರಾಂಡ್ ತಯಾರಿಸಿ ನಮ್ಮ ಕಥೆಯನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಮುಂದಾಗಬೇಕು. ಸಮಸ್ಯೆಗಳು ಎದುರಾದಾಗ ಅವುಗಳನ್ನು ಬಗೆಗರಿಸುವ ಹೊಸ ವಿಧಾನಗಳ ಕಡೆಗೆ ಮುನ್ನುಗ್ಗಬೇಕು ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಕಾಲೇಜಿನ ಆಡ್ಮಿನ್ ಬ್ಲಾಕ್ ನಿರ್ದೇಶಕ ಡಾ. ಚಾರ್ಲ್ಸ್ ವಿ ಫುಟಾರ್ಡೋ ಮಾತನಾಡಿ, ಹಲವಾರು ವರ್ಷಗಳಿಂದ ವಿಭಾಗ ಆಯೋಜಿಸುತ್ತಿರುವ ಶೂಟಿಂಗ್ ಸ್ಟರ‍್ಸ್ ಹೊಸ ಅಲೆಯನ್ನು ಸೃಷ್ಟಿಸುತ್ತಿದೆ. ಕಥೆ ಎಂಬುವುದು ರಿಲೆ ಆಟವಿದ್ದಂತೆ. ಕಥೆಯನ್ನು ಮುಂದಿನ ಪೀಳೀಗೆಗೆ ರವಾನಿಸುವುದು ನಮ್ಮ ಜವಬ್ದಾರಿ ಎಂದರು. ಕಾಲೇಜಿನ ಪ್ರಾಂಶುಪಾಲ ರೆ. ಫಾ. ಡಾ. ಪ್ರವೀಣ್ ಮಾರ್ಟಿನ್ ಎಸ್.ಜೆ ಮಾತನಾಡಿ ಕಥೆಗಳು ಯಾವಗಲೂ ಜನರನ್ನು ಆಕರ್ಷಸಿ ವೀಕ್ಷಕರ ಗಮನ ಸೆಳೆಯುವಂತಹದ್ದು, ಕೆಲವೊಂದು ಕಥೆಗಳು ನೈಜ ರೂಪವನ್ನು ಹೊಂದಿದೆ. ಕಥೆ ಹೇಳುವಿಕೆಯು ನಿರಂತರ ಪ್ರಕ್ರಿಯೆ ಹಾಗೂ ಕಾಲಾನುಕ್ರಮದಲ್ಲಿ ಹೊಸ ರೂಪವನ್ನು ಪಡೆಯುತ್ತವೆ ಎಂದರು.

ಸಮಾರೋಪ ಸಮಾರಂಭದಲ್ಲಿ ಕನ್ನಡ ಹಾಗೂ ತುಳು ಭಾಷಾ ನಟಿ ಚೈತ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು ಸಿನೆಮಾವನ್ನು ಹೃದಯದಿಂದ ನಿರ್ಮಾಣ ಮಾಡಬೇಕು. ಸಿನೆಮಾ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಕಠಿಣ ಶ್ರಮವನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಕಲಾ ನಿಕಾಯದ ಡೀನ್ ಡಾ. ರೋಸ್ ವೀರ ಡಿಸೋಜ ಮಾತನಾಡಿ, ಸಿನೆಮಾದ ವಿಷಯವು ಸಾಮಾಜಿಕ ಕಳಕಳಿ ಹಾಗೂ ಜವಬ್ದಾರಿಯನ್ನು ಹೊಂದಿರಬೇಕು ಎಂದರು. ಕುಲಸಚಿವ ಡಾ. ಆಲ್ವಿನ್ ಡೆ’ಸ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನವೆಂಬುವುದು ಕಥೆ ಇದ್ದಂತೆ. ಇಂದಿನಿಂದಲೇ ಕಥೆಗಳನ್ನು ಹೇಳಲು ಪ್ರಾರಂಭಿಸಿ ಎಂದರು.

ರಾಷ್ಟ್ರೀಯ ಮಟ್ಟದ ಕಿರು ಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಅಮೃತ ವಿಶ್ವ ವಿದ್ಯಾಪೀಠಂ, ಮೈಸೂರು ಕ್ಯಾಂಪಸ್‌ನ ಟೀಮ್ ತ್ರೀ ಎ.ಎಮ್.ನ ʼವಾಟ್ಸ್ ದಿ ಪ್ರೈಜ್?ʼ ಚಿತ್ರಕ್ಕೆ ಹಾಗೂ  ಟೀಮ್ ರೀಲ್ಸ್ ಆ್ಯಂಡ್ ಕ್ಲ್ಯಾಪ್ ಬೋರ್ಡ್ ʼಎ ಜೆಂಟಲ್‌ಮೆನ್ʼ ಚಿತ್ರ ದ್ವಿತೀಯ ಸ್ಥಾನವನ್ನು ಗಳಿಸಿತು.

ಸಾಕ್ಷ್ಯಾಚಿತ್ರ ಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ʼಸಿದ್ಧಿ ಸಾಂಗತ್ಯʼ ಪ್ರಥಮ ಸ್ಥಾನ ಗಳಿಸಿದರೆ, ಟೀಂ ಮಂದಾರ ಫಿಲ್ಮ್ ʼದೈವಾರಾಧನೆʼ ದ್ವಿತೀಯ ಸ್ಥಾನಗಳಿಸಿತು.

- Advertisement -
spot_img

Latest News

error: Content is protected !!