Monday, July 7, 2025
HomeUncategorizedಮಕ್ಕಳಾದ ಬಳಿಕವೇ ಸಿಗುತ್ತೆ ಮದುವೆ ಭಾಗ್ಯ..!

ಮಕ್ಕಳಾದ ಬಳಿಕವೇ ಸಿಗುತ್ತೆ ಮದುವೆ ಭಾಗ್ಯ..!

spot_img
- Advertisement -
- Advertisement -

ಮದುವೆಗಿಂತ ಮೊದಲು ತಾಯಿಯಾದ್ರೆ ಅದನ್ನು ನಮ್ಮ ಸಮಾಜ ಒಪ್ಪೋದಿಲ್ಲ. ಅಂತವರನ್ನು ನಮ್ಮ ಸಮಾಜ ನೋಡುವ ದೃಷ್ಟಿಯೇ ಬೇರೆ. ಆಶ್ಚರ್ಯದ ವಿಚಾರವೆಂದ್ರೆ ಭಾರತದಲ್ಲಿಯೂ ವಿಭಿನ್ನ ಸಂಪ್ರದಾಯ, ಪದ್ಧತಿಗಳಿವೆ. ಒಂದು ಬುಡಕಟ್ಟು ಜನಾಂಗದಲ್ಲಿ ತಾಯಿಯಾದ ಮೇಲೆಯೇ ಮದುವೆ ನಡೆಯುತ್ತದೆ.

ಯಸ್, Garasia ಪಂಗಡದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ರಾಜಸ್ತಾನ ಹಾಗೂ ಗುಜರಾತಿನ ಕೆಲ ಪ್ರದೇಶಗಳಲ್ಲಿ ಇವರು ವಾಸವಾಗಿದ್ದಾರೆ. ಈ ಜಾತಿಯ ಯುವಕರು ತಮಗಿಷ್ಟವಾಗುವ ಹುಡುಗಿ ಜೊತೆ ಮೊದಲು ಲಿವ್ ಇನ್ ನಲ್ಲಿರುತ್ತಾರೆ. ಮಕ್ಕಳಾದ ಮೇಲೆ ಮದುವೆಯಾಗಲು ಒಪ್ಪಿಗೆ ಸಿಗುತ್ತದೆ.

ಒಂದು ವೇಳೆ ಲಿವ್ ಇನ್ ನಲ್ಲಿದ್ದೂ ಮಕ್ಕಳಾಗಲಿಲ್ಲವೆಂದಾದ್ರೆ ಅವರು ಬೇರೆಯಾಗ್ತಾರೆ. ಬೇರೆಯವರ ಜೊತೆ ಸಂಬಂಧ ಬೆಳೆಸ್ತಾರೆ. ಒಟ್ಟಿನಲ್ಲಿ ಮಕ್ಕಳಾಗುವವರೆಗೂ ಅವರಿಗೆ ಮದುವೆ ಭಾಗ್ಯವಿಲ್ಲ. ಕೆಲವೊಮ್ಮೆ 50 ವರ್ಷಕ್ಕೆ ಮದುವೆಯಾದ ಉದಾಹರಣೆಗಳೂ ಇವೆ.

- Advertisement -
spot_img

Latest News

error: Content is protected !!