Sunday, May 5, 2024
Homeತಾಜಾ ಸುದ್ದಿಅಂತಿಮ ವರ್ಷದ ಪದವಿ ಪರೀಕ್ಷೆಯೂ ರದ್ದು- ಸರಾಸರಿ ಅಂಕ ನೀಡಿ ಪಾಸ್ ಮಾಡಲು ರಾಜ್ಯಸರ್ಕಾರ ನಿರ್ಧಾರ

ಅಂತಿಮ ವರ್ಷದ ಪದವಿ ಪರೀಕ್ಷೆಯೂ ರದ್ದು- ಸರಾಸರಿ ಅಂಕ ನೀಡಿ ಪಾಸ್ ಮಾಡಲು ರಾಜ್ಯಸರ್ಕಾರ ನಿರ್ಧಾರ

spot_img
- Advertisement -
- Advertisement -

ಮುಂಬೈ: ಮೊದಲ ಮತ್ತು ಎರಡನೇ ವರ್ಷದ ಪದವಿ ಪರೀಕ್ಷೆಯಲ್ಲಿ ಗಳಿಸಿಕೊಂಡಿರುವ ಅಂಕಗಳನ್ನು ಆಧರಿಸಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸರಾಸರಿ ಅಂಕಗಳನ್ನು ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದ್ದು, ಈ ಮೂಲಕ ಪರೀಕ್ಷೆಗಳನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನೇತೃತ್ವದ ಸರ್ಕಾರ ಬಂದಿದೆ.

ಈ ನಿರ್ಧಾರ ಘೋಷಿಸುವ ಮುನ್ನ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಉದ್ಧವ್​ ಠಾಕ್ರೆ ಸಭೆ ನಡೆಸಿದ್ದರು. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಅಥವಾ ರದ್ದುಗೊಳಿಸುವುದು ಚರ್ಚೆಯ ಪ್ರಮುಖ ವಿಷಯವಾಗಿತ್ತು. ಕೊನೆಗೆ ಸಭೆಯಲ್ಲಿ ಪರೀಕ್ಷೆಗಳನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಸಂಜೆ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್​ ಠಾಕ್ರೆ, ಕೋವಿಡ್​-19 ಪಿಡುಗಿನ ಈ ಸಂದರ್ಭದಲ್ಲಿ ಪರೀಕ್ಷೆಗಳನ್ನು ಆಯೋಜಿಸಲು ಸಾಧ್ಯವಿಲ್ಲ. ಹಾಗಾಗಿ 8 ಲಕ್ಷ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ವಿನಾಯ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಘೋಷಿಸಿದರು.

- Advertisement -
spot_img

Latest News

error: Content is protected !!