Friday, June 5, 2026
Homeಕರಾವಳಿಮಂಗಳೂರು:ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲಿಗಳ ಮಧ್ಯ ನಡೆದ ಕಚ್ಚಾಟ: ಗಾಯಗೊಂಡಿದ್ದ ಎರಡೂವರೆ ವರ್ಷದ ಹುಲಿಮರಿ ಸಾವು

ಮಂಗಳೂರು:ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲಿಗಳ ಮಧ್ಯ ನಡೆದ ಕಚ್ಚಾಟ: ಗಾಯಗೊಂಡಿದ್ದ ಎರಡೂವರೆ ವರ್ಷದ ಹುಲಿಮರಿ ಸಾವು

- Advertisement -
- Advertisement -

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲಿಗಳ ಮಧ್ಯ ನಡೆದ ಕಚ್ಚಾಟದಲ್ಲಿ ಗಾಯಗೊಂಡಿದ್ದ ಎರಡೂವರೆ ವರ್ಷದ ಹುಲಿಮರಿ ಸಾವನ್ನಪ್ಪಿದೆ.

ಕೆಲವು ದಿನಗಳ ಹಿಂದೆ ಹುಲಿಗಳ ನಡುವಿನ ಕಚ್ಚಾಟದಲ್ಲಿ ಎರಡೂವರೆ ವರ್ಷದ ಹುಲಿಮರಿಗ ಗಾಯಗೊಂಡಿತ್ತು. ಹುಲಿಮರಿಗೆ ಜೈವಿಕ ಉದ್ಯಾನವನದ ವೈದ್ಯಾಧಿಕಾರಿ ಡಾ.ವಿಷ್ಣು ದತ್, ಡಾ.ಮಧುಸೂದನ ಮತ್ತು ಡಾ.ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಅದು ಚೇತರಿಸಿಕೊಂಡಿತ್ತು. ಆದರೆ ಕಳೆದ ಶುಕ್ರವಾರ ಮಧ್ಯಾಹ್ನ ಹುಲಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಈ ವೇಳೆ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರೂ ಅದು ಫಲಿಸದೇ ಸಾವನ್ನಪ್ಪಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರು ತಿಳಿಸಿದ್ದಾರೆ.

ಇನ್ನು ಸಾವನ್ನಪ್ಪಿದ ಹುಲಿ ಮರಿಯ ಮರೋಣತ್ತರ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಕಿಡ್ನಿ ಮತ್ತು ಅಂಗಾಂಗಳ ವೈಫಲ್ಯ ಕಂಡು ಬಂದಿದೆ ಎಂದು ಉದ್ಯಾನವನದ ವೈದ್ಯಾಧಿಕಾರಿ ಡಾ. ವಿಷ್ಣು ದತ್ ತಿಳಿಸಿದ್ದಾರೆ.

- Advertisement -

Latest News

error: Content is protected !!