Wednesday, July 3, 2024
Homeತಾಜಾ ಸುದ್ದಿ‘ಗೌರಿ’ ಸಿನಿಮಾ ರಿಲೀಸ್ ದಿನಾಂಕ ಘೋಷಿಸಿದ ಇಂದ್ರಜಿತ್‌ ಲಂಕೇಶ್‌

‘ಗೌರಿ’ ಸಿನಿಮಾ ರಿಲೀಸ್ ದಿನಾಂಕ ಘೋಷಿಸಿದ ಇಂದ್ರಜಿತ್‌ ಲಂಕೇಶ್‌

spot_img
- Advertisement -
- Advertisement -

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ಸಮರ್ಜಿತ್‌ ಲಂಕೇಶ್, ಸಾನ್ಯಾ ಅಯ್ಯರ್‌ ನಟನೆಯ “ಗೌರಿ’ ಚಿತ್ರ ಆಗಸ್ಟ್‌ 15ರಂದು ತೆರೆಕಾಣುತ್ತಿದೆ. 

ಈ ಕುರಿತು ಮಾತನಾಡಿದ ಇಂದ್ರಜಿತ್‌, “ಹಾಡುಗಳ ಮೂಲಕ ಈಗಾಗಲೇ ಜನರನ್ನು ತಲುಪಿರುವ ಗೌರಿ ಚಿತ್ರ ಇದೇ ಅಗಸ್ಟ್‌ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಮ್ಮ ಗೌರಿ ಚಿತ್ರತಂಡ ಕರ್ನಾಟಕದಾದ್ಯಂತ ಸಂಚಾರ ಮಾಡುತ್ತಿದೆ. ವರಮಹಾಲಕ್ಷ್ಮೀ, ಸ್ವಾತಂತ್ರ್ಯ ದಿನಾಚರಣೆ, ರಕ್ಷಾ ಬಂಧನ ಹೀಗೆ ಸಾಲುಸಾಲು ರಜೆ ದಿನಗಳು ಆ ಸಮಯದಲ್ಲಿದೆ. ಹಾಗಾಗಿ ಆಗಸ್ಟ್‌ 15 ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಒಬ್ಬ ಪ್ರೇಕ್ಷಕನಾಗಿ ಸಿನಿಮಾ ನೋಡಿದಾಗ ನನಗೆ ಬಹಳ ಇಷ್ಟವಾಯಿತು. ಪ್ರೇಕ್ಷಕರಿಗೂ ನಮ್ಮ ಚಿತ್ರ ಮೆಚ್ಚುಗೆಯಾಗಲಿದೆ,” ಎಂದರು.

ಚಿತ್ರದ ನಾಯಕ ಸಮರ್ಜಿತ್‌ ಲಂಕೇಶ್‌ ಮಾತನಾಡಿ, “ಹೋದ ಕಡೆಯಲ್ಲಾ ಅಪ್ಪ ಹೇಳಿದ ಹಾಗೆ ನಮ್ಮ ಚಿತ್ರಕ್ಕೆ ಪಾಸಿಟಿವ್‌ ರೆಸ್ಪಾನ್ಸ್‌ ಸಿಗುತ್ತಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನನ್ನ ಹಲವು ವರ್ಷಗಳ ಶ್ರಮಕ್ಕೆ ಉತ್ತರ ಸಿಗುವ ದಿನ ಹತ್ತಿರ ಬಂದಿದೆ,” ಎಂದರು.

ನಾಯಕಿ ಸಾನ್ಯಾ ಅಯ್ಯರ್‌, “ಆಗಸ್ಟ್‌ 15 ನನ್ನ ಕನಸು ನನ್ನಸಾಗುವ ದಿನ. ಈ ದಿನಕ್ಕಾಗಿ ಕಾಯುತ್ತಿದೆ. ಅವಕಾಶ ನೀಡಿದ ಇಂದ್ರಜಿತ್‌ ಲಂಕೇಶ್‌ ಅವರಿಗೆ ಧನ್ಯವಾದ,” ಎಂದರು.

- Advertisement -
spot_img

Latest News

error: Content is protected !!