Thursday, May 16, 2024
Homeಕರಾವಳಿಕಾಸರಗೋಡುಕೇರಳದಲ್ಲಿ  ಭಾರತದ ಮೊತ್ತ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ

ಕೇರಳದಲ್ಲಿ  ಭಾರತದ ಮೊತ್ತ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ

spot_img
- Advertisement -
- Advertisement -

ಕೇರಳ: ಭಾರತದ ಮೊತ್ತ ಮೊದಲ ಮಂಕಿಪಾಕ್ಸ್ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ‌. ಯುಎಇಯಿಂದ ಮೂರು ದಿನಗಳ ಹಿಂದೆ ಮರಳಿದ್ದ ಕೇರಳದ ವ್ಯಕ್ತಿಯೊಬ್ಬನಲ್ಲಿ ಮಂಕಿಪಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಇದೀಗ ಅದು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಇದು ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದ್ದು, ಈಗಾಗಲೇ ಮಂಕಿಪಾಕ್ಸ್ ವಿಶ್ವದ ಹಲವು ದೇಶಗಳಲ್ಲಿ ಆತಂಕ ಸೃಷ್ಟಿಸಿದೆ.

ಮಂಕಿಪಾಕ್ಸ್ ಲಕ್ಷಣಗಳು ಕಾಣಿಸಿಕೊಂಡ ವ್ಯಕ್ತಿಯನ್ನು ವೈದ್ಯರ ನಿಗಾದಲ್ಲಿರಿಸಲಾಗಿದೆ ಹಾಗೂ ಆತನ ಸ್ಯಾಂಪಲ್‍ಗಳನ್ನು ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದ್ದು, ಗುರುವಾರ ಸಂಜೆಯೊಳಗೆ ವರದಿ ದೊರೆಯುವ ನಿರೀಕ್ಷೆಯಿದೆ,” ಎಂದು ಆರೋಗ್ಯ ಸಚಿವೆ ಹೇಳಿಕೆ ನೀಡಿದ್ದರು. ಇದೀಗ ಪ್ರಕರಣ ದೃಢಪಟ್ಟಿದೆ.

- Advertisement -
spot_img

Latest News

error: Content is protected !!