Friday, June 5, 2026
Homeತಾಜಾ ಸುದ್ದಿಭಾರತೀಯ ವಾಯು ಸೇನೆಗೆ ಸೇರಿದ ಯುದ್ಧ ವಿಮಾನ ಪತನ : ಪೈಲೆಟ್ ಪಾರು

ಭಾರತೀಯ ವಾಯು ಸೇನೆಗೆ ಸೇರಿದ ಯುದ್ಧ ವಿಮಾನ ಪತನ : ಪೈಲೆಟ್ ಪಾರು

- Advertisement -
- Advertisement -

ನವ ದೆಹಲಿ : ಮೇ.8 ಭಾರತೀಯ ವಾಯುಸೇನೆಯ ಯುದ್ಧ ವಿಮಾನ ಪಂಜಾಬ್‌ನಲ್ಲಿ ಅಪಘಾತಕ್ಕೀಡಾಗಿದೆ. ನವಾನ್ ‌ಶಹರ್ ಜಿಲ್ಲೆಯ ಚುಹಾದ್‌ಪುರದಲ್ಲಿ ಶುಕ್ರವಾರ ಮಧ್ಯಾಹ್ನ ಮಿಗ್ -29 ಅಪಘಾತಕ್ಕೀಡಾಗಿದೆ. ಪೈಲಟ್ ಎಂ.ಕೆ. ಪಾಂಡೆಟ್ ಅವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ಮಿಗ್ -29 ಪತನದ ಸುದ್ದಿ ತಿಳಿದು ಹತ್ತಿರದ ಹಳ್ಳಿಗಳ ಜನರು ಸ್ಥಳಕ್ಕಾಗಮಿಸಿದ್ರು. ತದನಂತರ ಅಧಿಕಾರಿಗಳು, ಪೊಲೀಸ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಂಪೂರ್ಣ ಅಪಘಾತದ ಬಗ್ಗೆ ವಾಯುಪಡೆಗೆ ಮಾಹಿತಿ ನೀಡಲಾಗಿದೆ.
ರಾತ್ರಿ 11ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗ್ತಿದೆ. ಜಮೀನಿನಲ್ಲಿ ಬಿದ್ದ ವಿಮಾನದಿಂದ ಸ್ಫೋಟದ ಶಬ್ಧ ಕೇಳಿ ಬಂದಿದೆ. ಈ ಪ್ರದೇಶವು ಇಂಡೋ-ಪಾಕಿಸ್ತಾನ ಗಡಿಯಲ್ಲಿದೆ.

- Advertisement -

Latest News

error: Content is protected !!