Monday, May 6, 2024
Homeಕರಾವಳಿಇಂಡಿಯಾಮಾಸ್ಟರ್ಸ್ ಗೇಮ್ಸ್ ನಲ್ಲಿ ನಾಲ್ಕು ಚಿನ್ನದ ಪದಕ; ಬಂಟ್ವಾಳ ಮೂಲದ ಅಂತರಾಷ್ಟ್ರೀಯ ಈಜುಪಟು ಪಾರ್ಥ ವಾರಣಾಶಿ ಸಾಧನೆ 

ಇಂಡಿಯಾಮಾಸ್ಟರ್ಸ್ ಗೇಮ್ಸ್ ನಲ್ಲಿ ನಾಲ್ಕು ಚಿನ್ನದ ಪದಕ; ಬಂಟ್ವಾಳ ಮೂಲದ ಅಂತರಾಷ್ಟ್ರೀಯ ಈಜುಪಟು ಪಾರ್ಥ ವಾರಣಾಶಿ ಸಾಧನೆ 

spot_img
- Advertisement -
- Advertisement -

ಪುತ್ತೂರು : ಬಂಟ್ವಾಳ ತಾಲೂಕಿನ ಅಡ್ಯನಡ್ಕ ವಾರಣಾಶಿ ಫಾರ್ಮ್ ನ ಅಂತರಾಷ್ಟ್ರೀಯ ಈಜುಪಟು ಪಾರ್ಥ ವಾರಣಾಶಿ ಅವರು ಬೆಂಗಳೂರಿನ ಪಡುಕೋಣೆ ದ್ರಾವಿಡ್ ಕ್ರೀಡಾ ಶ್ರೇಷ್ಠತಾ ಕೇಂದ್ರ(ಸಿಎಸ್.ಇ)ದಲ್ಲಿ ನಡೆದ ಪ್ರಥಮ ಪ್ಯಾನ್ ಇಂಡಿಯಾಮಾಸ್ಟರ್ಸ್ ಗೇಮ್ಸ್ 2022ರಲ್ಲಿನ ಈಜು ಸ್ಪರ್ಧೆಯಲ್ಲಿ ನಾಲ್ಕು ಚಿನ್ನದ ಪದಕ ಗಳಿಸಿದ್ದಾರೆ.

50 ಮೀ ಬ್ಯಾಖ್ ಸ್ಟ್ರೋಕ್, 50ಮೀ. ಬಟರ್ ಪ್ಲೈ, 50 ಮೀ. ಪ್ರೀ ಸ್ಟೈಲ್, 4*50 ಮಿಕ್ಸೆಡ್ ಪ್ರೀ ಸ್ಟೈಲ್ ರಿಲೇ ಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ ಕೀರ್ತಿ ಇವರದ್ದಾಗಿದೆ.

ಪಾರ್ಥ ವಾರಣಾಶಿ ಅವರು ಪುತ್ತೂರಿನ ಶಿವರಾಮ ಕಾರಂತ ಬಾಲವನ ಈಜು ತರಬೇತಿ ಕ್ಲಬ್(ಪುತ್ತೂರು ಅಕ್ವಾಟಿಕ್ ಕ್ಲಬ್-ಪಿಎಸಿ) ಮೂಲಕ ನೂರಾರು ಈಜು ಪ್ರತಿಭೆಗಳಿಗೆ ತರಬೇತಿ ನೀಡಿರುತ್ತಾರೆ. ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಖೇಲೋ ಇಂಡಿಯಾ ಯುನಿವರ್ಸಿಟಿ, ಎಸಿಯನ್ ಸ್ವಿಮಿಂಗ್ ಚಾಂಪಿಯನ್ ಶಿಪ್ ನಲ್ಲಿ ಪದಕ ಪಡೆದಿದ್ದಾರೆ. ಪಿಎಸಿ ವಿದ್ಯಾರ್ಥಿಗಳು 2019 ರಲ್ಲಿ19 ಅಂತರರಾಷ್ಟ್ರೀಯ ಪದಕ ಪಡೆದು ಸಾಧನೆ ಮೆರೆದಿದ್ದಾರೆ. 

ಸೌತ್ ಕೊರಿಯಾದಲ್ಲಿ ನಡೆದ ಪಿನಾ 2010 ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪಾರ್ಥ ಅವರು ಭಾರತ ತಂಡದ ಕೋಚ್ ಆಗಿ ಪ್ರತಿನಿಧಿಸಿದ್ದರು. ಅಷ್ಟಲ್ಲದೇ ಸರ್ಫ್ ಲೈಪ್ ಸೇವಿಂಗ್, ಇಂಡಿಯಾದ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. 

- Advertisement -
spot_img

Latest News

error: Content is protected !!