Friday, May 3, 2024
Homeಉದ್ಯಮವಿಶ್ವದಲ್ಲೇ ಹೆಚ್ಚು ಪಿಪಿಇ ಉತ್ಪಾದಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 2ನೇ ಸ್ಥಾನ, ಶೇ.50ರಷ್ಟು ಬೆಂಗಳೂರಿನಲ್ಲಿ ಉತ್ಪಾದನೆ

ವಿಶ್ವದಲ್ಲೇ ಹೆಚ್ಚು ಪಿಪಿಇ ಉತ್ಪಾದಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 2ನೇ ಸ್ಥಾನ, ಶೇ.50ರಷ್ಟು ಬೆಂಗಳೂರಿನಲ್ಲಿ ಉತ್ಪಾದನೆ

spot_img
- Advertisement -
- Advertisement -

ನವದೆಹಲಿ: ವಿಶ್ವದಲ್ಲೇ ಹೆಚ್ಚು ಪಿಪಿಇ ಉತ್ಪಾದಿಸುತ್ತಿರುವ ಎರಡನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದ್ದು, ಇನ್ನೂ ಸಂತಸದ ಸಂಗತಿ ಎಂದರೆ ಬೆಂಗಳೂರು ಪಿಪಿಇ ಉತ್ಪಾದನಾ ಹಬ್ ಆಗಿ ಮಾರ್ಪಟ್ಟಿದೆ.

ಮಾರ್ಚ್ 1ರಂದು ಕೊರೊನಾ ವೈರಸ್ ದೇಶಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಭಾರತದಲ್ಲಿ ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್‍ಮೆಂಟ್(ಪಿಪಿಇ) ಉತ್ಪಾದಿಸುವ ಒಂದೂ ಕಾರ್ಖಾನೆ ಇರಲಿಲ್ಲ. ಆದರೆ ಮೇ 18ರ ಹೊತ್ತಿಗೆ ದೇಶದಲ್ಲಿ ಒಟ್ಟು 600ಕ್ಕೂ ಹೆಚ್ಚು ಸರ್ಟಿಫೈಡ್ ಕಂಪನಿಗಳು ಪಿಪಿಇ ಕಿಟ್ ತಯಾರಿಸುತ್ತಿದೆ. ಎಂಬ ಅಂಶ ಇನ್ವೆಸ್ಟ್ ಇಂಡಿಯಾ ದಾಖಲೆಗಳ ಮೂಲಕ ತಿಳಿದಿದೆ.

ಪಿಪಿಇ ಕಿಟ್‍ಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಪ್ರಸ್ತುತ ಚೀನಾ ನಂಬರ್ 1 ಸ್ಥಾನದಲ್ಲಿದ್ದು, ಇದೀಗ ಭಾರತದ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಹಾಗೂ ಏಷ್ಯಾ ಫೆಸಿಪಿಕ್ ದೇಶಗಳು ಭಾರತದ ಪಿಪಿಇ ಕಿಟ್‍ಗಳಿಗಾಗಿ ಕಾತರದಿಂದ ಕಾಯುತ್ತಿವೆ

- Advertisement -
spot_img

Latest News

error: Content is protected !!