Friday, May 3, 2024
Homeಕರಾವಳಿಬೆಳ್ತಂಗಡಿ : ಬೆಳ್ತಂಗಡಿ : ಹಲ್ಲೆಯಿಂದ ಹೃದಯಾಘಾತಕ್ಕೊಳಗಾಗಿ ಇಂದಬೆಟ್ಟುವಿನಲ್ಲಿ ವ್ಯಕ್ತಿ ಸಾವು ಪ್ರಕರಣ: ಆರೋಪಿಗಳ ಜಾಮೀನು...

ಬೆಳ್ತಂಗಡಿ : ಬೆಳ್ತಂಗಡಿ : ಹಲ್ಲೆಯಿಂದ ಹೃದಯಾಘಾತಕ್ಕೊಳಗಾಗಿ ಇಂದಬೆಟ್ಟುವಿನಲ್ಲಿ ವ್ಯಕ್ತಿ ಸಾವು ಪ್ರಕರಣ: ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಜಿಲ್ಲಾ ಕೋರ್ಟ್ ; ಮೂವರು ಆರೋಪಿಗಳನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

spot_img
- Advertisement -
- Advertisement -

ಬೆಳ್ತಂಗಡಿ : ಆರು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಆರೋಪಿ ಹಾಗೂ ಆತನ ಸಂಬಂಧಿ ಮೇಲೆ ನಾಲ್ಕು ಜನರ ಗುಂಪು ಹಲ್ಲೆ ಮಾಡಿದ್ದು ಇದರಿಂದ ಇಬ್ಬರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಹಲ್ಲೆಗೊಳಗಾಗಿದ್ದ ಜಾರಪ್ಪ ನಾಯ್ಕ ಎಂಬವರು ಸಾವನ್ನಪ್ಪಿದ್ದು, ಈ ಪ್ರಕರಣ ಸಂಬಂಧ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿ ಮಂಗಳೂರು ಸೆಕ್ಷನ್ ಕೋರ್ಟ್ ಶನಿವಾರ ಆರೋಪಿಗಳನ್ನು ಬಂಧಿಸಲು ಆದೇಶ ಮಾಡಿದ್ದು ಅದರಂತೆ ಬೆಳ್ತಂಗಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಜುಲೈ 22 ರಂದು ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಶಾಂತಿನಗರ ಶಾಲಾ ಮೈದಾನಲ್ಲಿ ನಾರಾಯಣ ನಾಯ್ಕ್(47) ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಇಂದಬೆಟ್ಟಿನ ಚಂದ್ರಕಾಂತ್ ನಾಯ್ಕ್, ಮನೋಹರ್ ಗೌಡ, ಹರಿಪ್ರಸಾದ್ ಪೂಜಾರಿ,ಬಂಟ್ವಾಳದ ದೀಪಕ್ ಶೆಟ್ಟಿ ಎಂಬವರು ಸೇರಿ ಹಲ್ಲೆ ನಡೆಸಿದ್ದರು. ಈ ವೇಳೆ ತಡೆಯಲು ಬಂದ ನಾರಾಯಣ ನಾಯ್ಕ್ ಅವರ ಹೆಂಡತಿಯ ಅಕ್ಕನ ಗಂಡ ಜಾರಪ್ಪ ನಾಯ್ಕ್(55) ಅವರ ಮೇಲೂ ಹಲ್ಲೆ ಮಾಡಿದ್ದರು. ಈ ವೇಳೆ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಅವರು ಸಾವನ್ನಪ್ಪಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಜಾರಪ್ಪ ನಾಯ್ಕ್ ಅವರ ಮಗ ರಾಜಶೇಖರ್ ದೂರು ನೀಡಿದ್ದರು. ಅದರಂತೆ ಪೊಲೀಸರು ಐಪಿಸಿ ಸೆಕ್ಷನ್ 304, 34,3(2)(v),3(2)(v-a) SC ST act 2015 ರಂತೆ ಪ್ರಕರಣ ದಾಖಲಿಸಿದ್ದರು‌. ಬಳಿಕ ಆರೋಪಿಗಳು ಮಂಗಳೂರು ಸೆಕ್ಷನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದ್ರೆ ಕಳೆದ ಶನಿವಾರ ಜಾಮೀನು ಅರ್ಜಿ ವಜಾಗೊಳಿಸಿದ್ದು ಆರೋಪಿಗಳನ್ನು ಬಂಧಿಸಲು ಸೂಚಿಸಿದ್ದರು.

ಇಂದು ಬೆಳ್ತಂಗಡಿ ಪೊಲೀಸರು ಇಂದಬೆಟ್ಟು ಗ್ರಾಮದ ಪಿಲಪಾಡಿ ಕಜೆ ನಿವಾಸಿ ಕೊರಗಪ್ಪ ನಾಯ್ಕ್ ಅವರ ಮಗ ಚಂದ್ರಕಾಂತ ನಾಯ್ಕ್ , ಇಂದಬೆಟ್ಟು ಗ್ರಾಮದ ಮನ್ನಡ್ಕ ನಿವಾಸಿ ಸನತ್ ಕುಮಾರ್ ಮಗ ಮನೋಹರ್ ಗೌಡ, ಬಂಟ್ವಾಳ ತಾಲೂಕಿನ ದೀಪಕ್ ಶೆಟ್ಟಿ ಯನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಂಜೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಆರು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜುಲೈ 23 ರಂದು ಮಗುವಿನ ತಾಯಿ ಪೋಕ್ಸೋ ಅಡಿಯಲ್ಲಿ ದೂರು ದಾಖಲಿಸಿದ್ದರು. ಆರೋಪಿ ನಾರಾಯಣ ನಾಯ್ಕ್ ಹಲ್ಲೆಯಿಂದ ಗಾಯಗೊಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು 15 ದಿನದ ಚಿಕಿತ್ಸೆ ಪಡೆದ  ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಆರೋಪಿ ಜೈಲಿನಲ್ಲಿದ್ದಾನೆ.

- Advertisement -
spot_img

Latest News

error: Content is protected !!