Sunday, June 28, 2026
Homeಕರಾವಳಿಬೆಳ್ತಂಗಡಿ ಕಾಂಗ್ರೆಸ್‌ ಅಭ್ಯರ್ಥಿಯ ಬಗ್ಗೆ ಹೆಚ್ಚಿದ ಕುತೂಹಲ: ವಸಂತ ಬಂಗೇರಾ ಪರ ಒಲವು ತೋರಿದ ಸಿದ್ದರಾಮಯ್ಯ...

ಬೆಳ್ತಂಗಡಿ ಕಾಂಗ್ರೆಸ್‌ ಅಭ್ಯರ್ಥಿಯ ಬಗ್ಗೆ ಹೆಚ್ಚಿದ ಕುತೂಹಲ: ವಸಂತ ಬಂಗೇರಾ ಪರ ಒಲವು ತೋರಿದ ಸಿದ್ದರಾಮಯ್ಯ  

- Advertisement -
- Advertisement -

ಬೆಳ್ತಂಗಡಿ: ಮುಂಬರುವ ಚುನಾವಣೆಗೆ ವಸಂತ ಬಂಗೇರ ಒಲವು ತೋರಿಸಿದ್ದಲ್ಲಿ ಅಭ್ಯರ್ಥಿಯಾಗಿ ಆಯ್ಕೆ ಮಾಡಬಹುದು ಎಂದು  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಳ್ತಂಗಡಿ ಗುರುದೇವ ಕಾಲೇಜ್ ಮೈದಾನದಲ್ಲಿ ನಡೆದ ವಸಂತ ವಿನ್ಯಾಸ ಪುಸ್ತಕ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ವಸಂತ ಬಂಗೇರಾರನ್ನು ಅಭಿನಂದಿಸಿದ್ರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ  ವಸಂತ ಬಂಗೇರ ಅವರು ಮುಂದಿನ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಬಗ್ಗೆ ಮಾತನಾಡಿದ್ರು. ಅಲ್ಲದೇ ಈ ಬಗ್ಗೆ ನಿರ್ಧಾರ ಅವರಿಗೆ ಬಿಟ್ಟದ್ದು ಎಂಬುವುದಾಗಿ ಹೇಳಿದರು.

ಈಗಾಗಲೇ ವಿಧಾನ ಸಭಾ ಚುನಾವಣೆಗೆ ಬೆಳ್ತಂಗಡಿ ತಾಲೂಕಿನಿಂದ 3 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಆದರೆ ಟಿಕೆಟ್ ಯಾರಿಗೆ ಸಿಗುತ್ತೆ ಎಂಬ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದೆಡೆ ಕಾಂಗ್ರೆಸ್ ಯುವನಾಯಕರಿಗೆ ಟಿಕೆಟ್ ನೀಡಲು ಬಯಸಿದೆ. ಹೀಗಾಗಿ ಬೆಳ್ತಂಗಡಿ ತಾಲೂಕಿನ ಬೆಸ್ಟ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ರಕ್ಷಿತ್ ಶಿವರಾಂ ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಎಂದು ಬಹುತೇಕ ನಿರೀಕ್ಷೆಗಳಿತ್ತು. ಆದರೆ ಬಹುನಾಯಕತ್ವದ ಗೂಡಾಗಿರುವ ಕಾಂಗ್ರೆಸ್ ನಲ್ಲಿ ಬೆಳ್ತಂಗಡಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಮತ್ತೆ ಮತ್ತೇ ಹೆಚ್ಚಾಗುತ್ತಿದೆ.

- Advertisement -

Latest News

error: Content is protected !!