Tuesday, June 9, 2026
Homeಕರಾವಳಿಕರಾವಳಿಯಲ್ಲೂ ಕಾಣಿಸಿಕೊಳ್ಳುತ್ತಿದೆ ಗೋವುಗಳಲ್ಲಿ ಚರ್ಮ ಗಂಟು ರೋಗ!

ಕರಾವಳಿಯಲ್ಲೂ ಕಾಣಿಸಿಕೊಳ್ಳುತ್ತಿದೆ ಗೋವುಗಳಲ್ಲಿ ಚರ್ಮ ಗಂಟು ರೋಗ!

- Advertisement -
- Advertisement -

ಸವಣೂರು: ಕಳೆದೊಂದು ವರ್ಷದಿಂದ ಕರಾವಳಿಯಲ್ಲಿ ಗೋವುಗಳನ್ನು ಬಾಧಿಸುತ್ತಿರುವ ಚರ್ಮ ಗಂಟು ರೋಗ ಹೈನುಗಾರನ್ನು ಸಂಕಷ್ಟಕ್ಕೆ ಸಿಲುಕಿಸಿದೆ . ಹೆಚ್ಚಾಗಿ ಮಲೆನಾಡಿನಲ್ಲಿ ಕಾಣಿಸುತಿದ್ದ ಈ ಕಾಯಿಲೆ ಇತ್ತೀಚಿನ ವರ್ಷಗಳಲ್ಲಿ ಕರಾವಳಿಯ ಅಲ್ಲಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ.

ಆರಂಭದಲ್ಲಿ ಒಂದರೆಡು ಕಡೆ ಗಂಟು ರೂಪದಲ್ಲಿ ಗೋವಿನ ಮೈಯಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಕೆಲವೇ ದಿನಗಳಲ್ಲಿ ಮೈಯೆಲ್ಲ ಆವರಿಸಿಕೊಳ್ಳುತ್ತದೆ. ಬಳಿಕ ಗಂಟುಗಳು ಒಡೆದು ಕೀವು ಸೋರುತ್ತದೆ. ಇದು ನೊಣಗಳ ಮೂಲಕ ಹರಡುವುದರಿಂದ ಅಕ್ಕಪಕ್ಕದಲ್ಲಿರುವ ಗೋವುಗಳಿಗೆ ಹರಡುವ ಸಾಧ್ಯತೆಯಿದೆ. ಒಂದೊಮ್ಮೆ ಒಂದು ಹಸುವಿನಲ್ಲಿ ಕಾಣಿಸಿಕೊಂಡರೂ ಜತೆಗಿರುವ ಎಲ್ಲ ಹಸುಗಳಿಗೆ ಚಿಕಿತ್ಸೆ ನೀಡಬೇಕಾಗುತ್ತದೆ.

ಈ ಕಾಯಿಲೆಗೆ ನಿರ್ದಿಷ್ಟ ಔಷಧವನ್ನು ಇನ್ನೂ ಕಂಡು ಹಿಡಿದಿಲ್ಲ. ಸದ್ಯ ಕುರಿಗಳಿಗೆ ನೀಡುವ ರೋಗ ನಿರೋಧಕ ಚುಚ್ಚು ಮದ್ದನ್ನು ನೀಡಲಾಗುತ್ತದೆ. ಆದರೆ ಅದನ್ನು ನೀಡುವುದರಿಂದ ಹಾಲು ನೀಡುವ ಗೋವುಗಳ ಹಾಲಿನ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಅಲ್ಲದೆ ಗರ್ಭ ಕೋಶಕ್ಕೆ ತೊಂದರೆಯಾಗುತ್ತದೆ ಎನ್ನುತ್ತಾರೆ ಪಶು ವೈದ್ಯರು. ಈ ಕಾಯಿಲೆಗೆ ಆಯುರ್ವೇದದಲ್ಲೂ ಔಷದಿ ಇದೆ, ಅದಕ್ಕೆ ವೀಳ್ಯದೆಲೆ 10, ಕಾಳುಮೆಣಸು 10, ಉಪ್ಪು 10 ಗ್ರಾಂ, ಬೆಲ್ಲ 50 ಗ್ರಾಂ ತೆಗೆದುಕೊಂಡು ರುಬ್ಬಿ ದಿನಕ್ಕೆ 2 ಭಾರಿ ರೋಗ ಬಾಧಿತ ಗೋವುಗಳಿಗೆ ತಿನ್ನಿಸಬೇಕು. ಅಲ್ಲದೆ ಅರಶಿಣ 20 ಗ್ರಾಂ, ಮೆಹಂದಿ ಸೊಪ್ಪು 1 ಹಿಡಿ (ಮುಷ್ಟಿ), ಬೇವಿನ ಸೊಪ್ಪು 1 ಹಿಡಿ, ತುಳಸಿ ಎಲೆ 10 ಹಿಡಿ, ಬೆಳ್ಳುಳ್ಳಿ 10 ಎಸಳುಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಬೇಯಿಸಿ ತಣ್ಣಗೆ ಮಾಡಿ ಗಾಯಗಳಿಗೆ ದಿನಕ್ಕೆ ಮೂರು ಬಾರಿ ಹಚ್ಚಬೇಕು ಎಂದು ಪಶುವೈದ್ಯರು ಸಲಹೆ ನೀಡುತ್ತಾರೆ.

- Advertisement -

Latest News

error: Content is protected !!