Wednesday, April 16, 2025
Homeತಾಜಾ ಸುದ್ದಿಪುತ್ತೂರು: ಅಡಿಕೆಗೆ ಬಂತು ಬಂಗಾರದ ಬೆಲೆ: ಕೆ.ಜಿ.ಗೆ 450 ರೂ. ಸನಿಹದಲ್ಲಿ ಹೊಸ ಅಡಿಕೆ

ಪುತ್ತೂರು: ಅಡಿಕೆಗೆ ಬಂತು ಬಂಗಾರದ ಬೆಲೆ: ಕೆ.ಜಿ.ಗೆ 450 ರೂ. ಸನಿಹದಲ್ಲಿ ಹೊಸ ಅಡಿಕೆ

spot_img
- Advertisement -
- Advertisement -

ಪುತ್ತೂರು: ಎರಡು ತಿಂಗಳ ಹಿಂದೆ ಕುಸಿತದ ಮುಖ ಮಾಡಿದ ಬಿಳಿ ಚಾಲಿ ಅಡಿಕೆ ಧಾರಣೆ ಕಳೆದೊಂದು ತಿಂಗಳಿನಿಂದ ನಿಧಾನವಾಗಿ ಚೇತರಿಕೆಯ ಹಾದಿ ಹಿಡಿದಿದೆ. ಎರಡು ತಿಂಗಳ ಹಿಂದೆ ಕೆ ಜಿ. ಗೆ ರೂ 390 ತಲುಪಿದ್ದ ಹೊಸ ಅಡಿಕೆ ಧಾರಣೆ ಇದೀಗ ಕೆ.ಜಿ.ಗೆ 450 ರೂ.ಸನಿಹಕ್ಕೆ ತಲುಪಿದೆ.

ಕೆಲವು ದಿನಗಳ ಹಿಂದೆ ಕ್ಯಾಂಪ್ಕೋದಲ್ಲಿ ಹೊಸ ಅಡಿಕೆಯನ್ನು 430 ರೂ., ಹಳೆ ಅಡಿಕೆಯನ್ನು 520 ರೂ.ಗೆ ಖರೀದಿಸಲಾಗುತ್ತಿತ್ತು. ಇದೀಗ ಧಾರಣೆ ಕೊಂಚ ಏರಿದೆ. ಜು. 11ರಂದು ಪುತ್ತೂರು ಕ್ಯಾಂಪೋದಲ್ಲಿ ಹೊಸದಕ್ಕೆ 435-450 ರೂ. ಇದ್ದರೆ ಹಳೆಯದಕ್ಕೆ 510-550 ರೂ., ಜು. 19ರಂದು ಹೊಸದಕ್ಕೆ 440 ರೂ., ಹಳೆಯದಕ್ಕೆ 565 ರೂ. ಇತ್ತು.

ಬೆಳ್ಳಾರೆ ಹೊರ ಮಾರುಕಟ್ಟೆಯಲ್ಲಿ ಜು. 11ರಂದು ಹೊಸದಕ್ಕೆ 442 ರೂ. ಇದ್ದರೆ ಹಳೆಯದಕ್ಕೆ 560 ರೂ. ಇತ್ತು. ಜು.19ರಂದು ಕ್ರಮವಾಗಿ 447 ರೂ. ಮತ್ತು 565 ರೂ.ಗಳಲ್ಲಿತ್ತು.

- Advertisement -
spot_img

Latest News

error: Content is protected !!