Saturday, May 18, 2024
Homeತಾಜಾ ಸುದ್ದಿಅಡಿಕೆ ಧಾರಣೆಯಲ್ಲಿ ಏರಿಕೆ: ಹೊಸ ಅಡಿಕೆ ಧಾರಣೆ 455 ರೂ. ಏರಿಕೆ

ಅಡಿಕೆ ಧಾರಣೆಯಲ್ಲಿ ಏರಿಕೆ: ಹೊಸ ಅಡಿಕೆ ಧಾರಣೆ 455 ರೂ. ಏರಿಕೆ

spot_img
- Advertisement -
- Advertisement -

ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಶುಕ್ರವಾರ ಹಳೆ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡಿತ್ತು. ಕ್ಯಾಂಪ್ಕೋ ಹಳೆ ಅಡಿಕೆ ಧಾರಣೆಯನ್ನು 5 ರೂಪಾಯಿ ಏರಿಕೆ ಮಾಡಿದ ಬೆನ್ನಲ್ಲೇ ಖಾಸಗಿ ವಲಯದಲ್ಲೂ ಹಳೆ ಅಡಿಕೆ ಧಾರಣೆ ಏರಿಕೆಯಾಗಿತ್ತು. ಇದೀಗ ಖಾಸಗಿ ವಲಯದಲ್ಲಿ ಹೊಸ ಅಡಿಕೆ ಧಾರಣೆ ಕೂಡಾ ಏರಿಕೆಯಾಗಿದ್ದು 455 ರೂಪಾಯಿಗೆ ಖರೀದಿ ನಡೆಯುತ್ತಿದೆ. ಇದೇ ವೇಳೆ ಕ್ಯಾಂಪ್ಕೋ 450 ರೂಪಾಯಿಗೆ ಹೊಸ ಅಡಿಕೆ ಹಾಗೂ ಸದ್ಯ 560 ರೂಪಾಯಿಗೆ ಹಳೆ ಅಡಿಕೆ ಖರೀದಿ ನಡೆಯುತ್ತಿದೆ. ಖಾಸಗಿ ಮಾರುಕಟ್ಟೆಯಲ್ಲೂ ಅಡಿಕೆ ಧಾರಣೆ ಏರಿಕೆಯಾಗಿದ್ದು 570 ರೂಪಾಯಿವರೆಗೂ ಖರೀದಿ ನಡೆಸಿದೆ.

ಅಡಿಕೆ ಮಾರುಕಟ್ಟೆಯಲ್ಲಿ ಸದ್ಯ ಅಡಿಕೆ ಧಾರಣೆ ಏರಿಕೆ ಇದೆ. ಪೂರೈಕೆ ಆಗುತ್ತಿಲ್ಲ. ಹೀಗಾಗಿ ಧಾರಣೆಯಲ್ಲಿ ಏರಿಕೆಯಾಗಿದೆ. ಸದ್ಯ ಕ್ಯಾಂಪ್ಕೋ ಕೂಡ ಸ್ಥಿರ ಧಾರಣೆ ಕಡೆ ಗಮನಹರಿಸಿದೆ. ಹೀಗಾಗಿ ಅಡಿಕೆ ಬೆಳೆಗಾರರಿಗೂ ಮಾರುಕಟ್ಟೆ ಸ್ಥಿರತೆ ಹಾಗೂ ಮಾರುಕಟ್ಟೆ ಕುಸಿಯದಂತೆ ತಡೆಯಲು ಸಾಧ್ಯವಾಗಿದೆ.

- Advertisement -
spot_img

Latest News

error: Content is protected !!