Friday, June 5, 2026
Homeಕರಾವಳಿಬೆಳ್ತಂಗಡಿಯ ಮುಂಡಾಜೆಯಲ್ಲಿ ನದಿಗೆ ಕೋಳಿ ತ್ಯಾಜ್ಯ ಎಸೆದ ದುಷ್ಕರ್ಮಿಗಳು

ಬೆಳ್ತಂಗಡಿಯ ಮುಂಡಾಜೆಯಲ್ಲಿ ನದಿಗೆ ಕೋಳಿ ತ್ಯಾಜ್ಯ ಎಸೆದ ದುಷ್ಕರ್ಮಿಗಳು

- Advertisement -
- Advertisement -

ಬೆಳ್ತಂಗಡಿ: ನದಿಗೆ ದುಷ್ಕರ್ಮಿಗಳು ಕೋಳಿ ತ್ಯಾಜ್ಯ ಎಸೆದಿರುವ ಘಟನೆ ಮುಂಡಾಜೆ  ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಕಾಪು ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಮೃತ್ಯುಂಜಯ ನದಿಗೆ ಪಾಪಿಗಳು ಕೋಳಿ ತ್ಯಾಜ್ಯ ಎಸೆದಿದ್ದಾರೆ.

ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ನಾಲ್ಕಾರು ಗೋಣಿ ಚೀಲಗಳಲ್ಲಿ ಕೋಳಿ ತ್ಯಾಜ್ಯ ಕಂಡು ಬಂದಿದ್ದು ಇನ್ನಷ್ಟು ತ್ಯಾಜ್ಯವನ್ನು ನದಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಈ ಪ್ರದೇಶದಲ್ಲಿ ಜನಸಂಚಾರ ಇರುವುದಿಲ್ಲ. ಈ ಕಾರಣದಿಂದ ತ್ಯಾಜ್ಯ ಎಸೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮುಂಡಾಜೆ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಲಾಗಿದೆ.

- Advertisement -

Latest News

error: Content is protected !!