Sunday, June 7, 2026
Homeತಾಜಾ ಸುದ್ದಿಎಲ್ಲಾ ಆಯ್ತು ಈಗ ಬಂದಿದೆ ನೋಡಿ ಕೊರೊನಾ ಚಹಾ...

ಎಲ್ಲಾ ಆಯ್ತು ಈಗ ಬಂದಿದೆ ನೋಡಿ ಕೊರೊನಾ ಚಹಾ…

- Advertisement -
- Advertisement -

ಹೈದರಾಬಾದ್ : ಈಗ ಸರ್ವವೂ ಕೊರೊನಾ ಮಯಂ ಅನ್ನೋ ಹಾಗಾಗಿದೆ. ಎಲ್ಲಿ ನೋಡಿದರೂ ಕೊರೊನಾದ್ದೇ ಮಾತು. ಪ್ರತಿಯೊಬ್ಬರು ಕೊರೊನಾಗೆ ತಮ್ಮದೇ ಆದ ಮೆಡಿಸಿನ್ ಹೇಳೋರೆ ಆಗಿ ಹೋಗಿದ್ದಾರೆ. ಕೊರೊನಾಗೆ ಆ ಕಷಾಯ ಉತ್ತಮ ಈ ಕಷಾಯ ಉತ್ತಮ ಅಂತಾ ಹೇಳ್ತಾನೆ ಇರ್ತಾರೆ. ಅಲ್ಲದೇ ಕೊರೊನಾ ಹೆಸರಲ್ಲಿ ಈಗ ಮಾರುಕಟ್ಟೆಗೆ ನಾನಾ ರೀತಿಯ ವಸ್ತುಗಳು ಕೂಡ ಆಗಮಿಸೋದಕ್ಕೆ ಶುರುವಾಗಿದೆ.

ಹೀಗಿರುವಾಗಲೇ ಹೈದರಾಬಾದ್ ನಲ್ಲಿ ಟೀ ಅಂಗಡಿ ಮಾಲೀಕರೊಬ್ಬರು ಕೊರೊನಾ ಹೆಸರನ್ನೇ ಬಂಡವಾಳವಾಗಿಸಿಕೊಂಡಿದ್ದಾರೆ. ಹೈದ್ರಾಬಾದ್ ಹನಂಕೊಂಡ ವಾರಂಗಲ್‌ನ ಸಣ್ಣ ಚಹಾ ಅಂಗಡಿಯವರು ‘ಕೊರೊನಾ ಸ್ಪೆಷಲ್ ಟೀ’ ಮಾರಾಟ ಮಾಡಿ ಗಮನ ಸೆಳೆಯುತ್ತಿದ್ದಾರೆ. ಅವರು ಮಾಡುವ ಕೊರೊನಾ ಚಹಾ ಕುಡಿಯಲು ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಹನಮಕೊಂಡ ರಾಮ್ ನಗರದಲ್ಲಿ ಟಿಫಿನ್ ಸೆಂಟರ್ ನಡೆಸುತ್ತಿದ್ದು, ಅವರು ಶುಂಠಿ, ದಾಲ್ಚಿನ್ನಿ ಮತ್ತು ಇತರ ಪದಾರ್ಥಗಳನ್ನು ಬಳಸಿ ಚಹಾವನ್ನು ತಯಾರಿಸುತ್ತಿದ್ದಾರೆ, ಅದು ಈಗ ಜನಪ್ರಿಯವಾಗಿದೆ. ಪ್ರತಿ ಚಹಾ ಕಪ್‌ಗೆ 10 ರೂ. ನಿಗದಿಪಡಿಸಿದ್ದು, ಚಹಾವನ್ನು ರುಚಿ ನೋಡಿದ ಕೆಲವರು ಚಹಾ ಕುಡಿದ ನಂತರ ನೋಯುತ್ತಿದ್ದ ತಮ್ಮ ಗಂಟಲಿಗೆ ಪರಿಹಾರ ಕಂಡುಕೊಂಡಿದ್ದಾರಂತೆ. ಅಂತೂ ಕೊರೊನಾದಿಂದ ಎಲ್ಲ ಮುಗಿತು ಅಂತಾ ಕೆಲವರು ತಲೆ ಮೇಲೆ ಕೈ ಹೊತ್ತು ಕುಳಿತ್ರೆ ಇನ್ನೂ ಕೆಲವರು ಅದನ್ನೇ ಬಂಡವಾಳ ಮಾಡಿಕೊಂಡು ಬದುಕು ಮುನ್ನಡೆಸುತ್ತಿದ್ದಾರೆ.

ಈ ಮೊದಲು ದಿನದಲ್ಲಿ 50 ಟೀ ಮಾರಾಟ ಮಾಡುತ್ತಿದ್ದು, ಆದರೆ ಈಗ ದಿನಕ್ಕೆ 600 ಟೀ ಮಾರಾಟ ಮಾಡುತ್ತಿರುವುದಾಗಿ ಟೀ ಶಾಪ್ ಮಾಲೀಕರು ಹೇಳಿಕೊಂಡಿದ್ದಾರೆ.

- Advertisement -

Latest News

error: Content is protected !!