Friday, September 13, 2024
Homeತಾಜಾ ಸುದ್ದಿಲಾಕ್ ಡೌನ್ ನಲ್ಲಿ ಸಿಲುಕಿರುವವರಿಗೆ ಇಲ್ಲಿದೆ ರಾಜ್ಯ ಸರ್ಕಾರದಿಂದ ಮಹತ್ವ ಮಾಹಿತಿ

ಲಾಕ್ ಡೌನ್ ನಲ್ಲಿ ಸಿಲುಕಿರುವವರಿಗೆ ಇಲ್ಲಿದೆ ರಾಜ್ಯ ಸರ್ಕಾರದಿಂದ ಮಹತ್ವ ಮಾಹಿತಿ

spot_img
- Advertisement -
- Advertisement -

ಬೆಂಗಳೂರು: ಲಾಕ್ ಡೌನ್ ನಿಂದ ಒಂದೆಡೆ ಸಿಲುಕಿರುವ ವಲಸೆ ಕಾರ್ಮಿಕರು,ಯಾತ್ರಾರ್ಥಿಗಳು, ಪ್ರವಾಸಿಗರು,ವಿದ್ಯಾರ್ಥಿಗಳು ಮತ್ತೊಂದು ಕಡೆ ತೆರಳಲು ಒಂದು ದಿನಕ್ಕೆ,ಒಂದು ಬಾರಿಗೆ ಪ್ರಯಾಣಿಸಲು ಪಾಸ್ ಗಳನ್ನು ಸಂಬಂಧಿತ ಜಿಲ್ಲಾಧಿಕಾರಿಗಳು/ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೀಡಲಿದ್ದಾರೆ.ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ.ಊರುಗಳಿಗೆ ಹಿಂತಿರುಗುವ ಜನರ ಪ್ರಯಾಣದ ಸಮಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶ, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪಾಸ್ ಬೇಕಾದವರು ತಮ್ಮ ದಾಖಲೆಗಳನ್ನು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಥವಾ ಕಮಿಷನರೇಟ್‍ಗಳಲ್ಲಿ ಉಪ ಪೊಲೀಸ್ ಕಮಿಷನರ್ ಗೆ ಪಾಸ್‍ಗಳನ್ನು ವಿತರಿಸಲು ಅಧಿಕಾರ ನೀಡಲಾಗಿದ್ದು, ಇದೇ ವೇಳೆ ಒಂದು ದಿನ, ಒಂದು ಕಡೆಗೆ ಹೋಗಲು ಮಾತ್ರ ಈ ಪಾಸ್ ಬಳಸಬಹುದು. ಅಂತರ್ ಜಿಲ್ಲೆಗಳಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಮ್ಮ ಆದೇಶದಲ್ಲಿ ಪ್ರಕಟಿಸಿದ್ದಾರೆ.

- Advertisement -
spot_img

Latest News

error: Content is protected !!