Saturday, May 4, 2024
Homeಕರಾವಳಿಬೆಳ್ತಂಗಡಿ: ಚಿಕನ್ ಸೆಂಟರ್ ಹೆಸರಲ್ಲಿ ತುರ್ತು ಸೇವೆಗಳ ಪಾಸ್ ಪಡೆದು ಅಕ್ರಮ...

ಬೆಳ್ತಂಗಡಿ: ಚಿಕನ್ ಸೆಂಟರ್ ಹೆಸರಲ್ಲಿ ತುರ್ತು ಸೇವೆಗಳ ಪಾಸ್ ಪಡೆದು ಅಕ್ರಮ ಗೋಸಾಗಾಟ ಪತ್ತೆ, ಭಜರಂಗದಳ ಕಾರ್ಯಕರ್ತರಿಬ್ಬರ ಮೇಲೆ‌ ದಾಳಿ

spot_img
- Advertisement -
- Advertisement -

ಬೆಳ್ತಂಗಡಿ : ಆಟಿ ಅಮವಾಸ್ಯೆ ದಿನ ಮುಂಜಾನೆ ಮೂರು ಗಂಟೆ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ಸುರ್ಯ ಪಡ್ಪು ಗೋ ವ್ಯಾಪರಿ ಆಟೋ ಚಾಲಕ ರಾಜೇಶ್ ಆತನ ಮನೆಯಿಂದ ಪಿಕಪ್ ವಾಹನದಲ್ಲಿ ಮೂರು ದನ , ಎರಡು ಕರುವನ್ನು ಅಮಾನುಷವಾಗಿ ಕಟ್ಟಿಹಾಕಿ ಸಾಗಿಸುತ್ತಿದ್ದಾಗ ಭಜರಂಗದಳ ಕಾರ್ಯಕರ್ತರು ಮನೆಯ ಪಕ್ಕದಲ್ಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ರಾಜೇಶ್ ಮತ್ತು ಆತನ ಸಹಚರರು ಅವರ ಬೆಂಗಾವಲು ವಾಹನ ಅಲ್ಟೋ ಕಾರಿನಲ್ಲಿ ಪರಾರಿಯಾಗಿದ್ದಾರೆ.

ತುರ್ತು ಸೇವೆಗಳ ಪಾಸ್


ಈ ವೇಳೆ ಅವರದ್ದೇ ಮತ್ತೊಂದು ತಂಡ ಕಸಾಯಿಖಾನೆಗೆ ದನವನ್ನು ತುರ್ತು ಸೇವೆಗಳ ಪಾಸ್ ಪಡೆದು ಪಿಕಪ್ ವಾಹನ ಮತ್ತು ಬೆಂಗಾವಲು ಕಾರಲ್ಲಿ ಹೋಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಅವರನ್ನು ಹಿಡಿಯಲು ಗುರುವಾಯನಕೆರೆ ಬಳಿ ಹೋದಾಗ ಇಬ್ಬರು ಭಜರಂಗದಳ ಕಾರ್ಯಕರ್ತರಾದ ಗುರು ಮತ್ತು ನಿತೀಶ್ ಮೇಲೆ ಮಾರಣಾಂತಿಕ ದಾಳಿ ಮಾಡಿ, ಎರಡು ಮೊಬೈಲ್ , ನಗ ನಗದು ದರೋಡೆ ಮಾಡಿದ್ದಾರೆ. ಹಲ್ಲೆಗೊಳಗಾದ ಭಜರಂಗದಳ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿದ್ದಾರೆ‌.

ಚಿಕನ್ ಸೆಂಟರ್ ಹೆಸರಲ್ಲಿ ತುರ್ತು ಸೇವೆಗಳ ಪಾಸ್ ಪಡೆದು ಅಕ್ರಮ ಗೋಸಾಗಾಟ ಪತ್ತೆ

ಬೆಳ್ತಂಗಡಿ: ಚಿಕನ್ ಸೆಂಟರ್ ಹೆಸರಲ್ಲಿ ತುರ್ತು ಸೇವೆಗಳ ಪಾಸ್ ಪಡೆದು ಅಕ್ರಮ ಗೋಸಾಗಾಟ ಪತ್ತೆ, ಭಜರಂಗದಳ ಕಾರ್ಯಕರ್ತರಿಬ್ಬರ ಮೇಲೆ‌ ದಾಳಿ

Posted by Maha Xpress on Sunday, 19 July 2020
ರಾಜೇಶ್


ಮಂಗಳೂರಿನ ಕರೀಂ ಎಂವರಿಗೆ ಸೇರಿದ ಪಿಕಪ್ ಇದಾಗಿದ್ದು, ಕೊರೊನಾ ಲಾಕ್ ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳ ಸಾಗಾಟಕ್ಕೆ ಪಾಸ್ ಪಡೆದು ಗ್ರಾಮೀಣ ಭಾಗಗಳಿಂದ ಗೋ ಕಳ್ಳತನ ಮಾಡಿ ಕಸಾಯಿಖಾನೆಗೆ ಸಾಗಿಸುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ .
ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮ ಗೋ ಸಾಗಾಟದ ದೊಡ್ಡ ಜಾಲ ಇದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.

- Advertisement -
spot_img

Latest News

error: Content is protected !!