Thursday, June 4, 2026
Homeಅಪರಾಧಮಂಗಳೂರು ಏರ್ ಪೋರ್ಟ್ ನಲ್ಲಿ ಚಿನ್ನ ವಶ: ಕೇರಳದ ಇಬ್ಬರ ಬಂಧನ

ಮಂಗಳೂರು ಏರ್ ಪೋರ್ಟ್ ನಲ್ಲಿ ಚಿನ್ನ ವಶ: ಕೇರಳದ ಇಬ್ಬರ ಬಂಧನ

- Advertisement -
- Advertisement -

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ‌ದುಬೈನಿಂದ ಮಂಗಳೂರಿಗೆ ಬಂದ ವಿಮಾನದಲ್ಲಿ ಚಿನ್ನ ಸಾಗಾಟ ಮಾಡಲಾಗುತ್ತಿತ್ತು. ಕೇರಳದ ಕೊಯಿಕ್ಕೋಡ್ ನ ಮೊಹಮ್ಮದ್ ಮೂಸ ಮಿಯಾಸ್ (18) ಮತ್ತು ಉಪ್ಪಳದ ಮೊಹಮ್ಮದ್ ಅನ್ಸಾರ್ ಕಯ್ಯಾರ್ (34) ಬಂಧಿತರಾಗಿದ್ದಾರೆ. ಸೂಟ್ ಕೇಸ್ ಕೆಳಭಾಗದಲ್ಲಿ ಅಡಗಿಸಿ ಚಿನ್ನವನ್ನು ಪೌಡರ್ ರೂಪದಲ್ಲಿ ಸಾಗಾಟ ಮಾಡಲಾಗುತ್ತಿತ್ತು.‌

ಬಂಧಿತ ಇಬ್ಬರಿಂದ 703 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡಿರುವ ಚಿನ್ನದ ಮೌಲ್ಯ 34 ಲಕ್ಷದ 46 ಸಾವಿರದ 464 ರೂಪಾಯಿ‌ ಆಗಿದೆ.‌ ಚಿನ್ನ ಮತ್ತು ಇಬ್ಬರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!