Saturday, June 6, 2026
Homeಅಪರಾಧಅಕ್ರಮವಾಗಿ ಸ್ಕೂಟರ್ ನಲ್ಲಿ ಗಾಂಜಾ ಸಾಗಾಟ; ಇಬ್ಬರು ಆರೋಪಿಗಳ ಸಮೇತ 2 ಕೆಜಿ ಗಾಂಜಾ ವಶಕ್ಕೆ...

ಅಕ್ರಮವಾಗಿ ಸ್ಕೂಟರ್ ನಲ್ಲಿ ಗಾಂಜಾ ಸಾಗಾಟ; ಇಬ್ಬರು ಆರೋಪಿಗಳ ಸಮೇತ 2 ಕೆಜಿ ಗಾಂಜಾ ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಬೆಳ್ತಂಗಡಿ: ಇಲ್ಲಿಯ ಕಳಿಯ ಗ್ರಾಮದ ಗೇರುಕಟ್ಟೆ ಬಳಿ ಓಡುರೊಟ್ಟು ಎಂಬಲ್ಲಿ ಅಕ್ರಮವಾಗಿ ಸ್ಕೂಟರ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು 2 ಕೆಜಿ ಗಾಂಜಾ ಸಮೇತ ಬೆಳ್ತಂಗಡಿ ಪೊಲೀಸ್‌ ಠಾಣಾ ಪಿ ಎಸ್‌ ಐ (ತನಿಖೆ) ರವರಾದ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ: ದಿನಾಂಕ: 29-02-2024 ರಂದು ಬೆಳಿಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಪಿ.ಎಸ್‌.ಐ (ತನಿಖೆ) ರವರಾದ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು, ಕಳಿಯ ಗ್ರಾಮದ ಗೇರುಕಟ್ಟೆ ಬಳಿ ಓಡುರೊಟ್ಟು ಎಂಬಲ್ಲಿ, ಕೆಎ 70 ಜೆ 5511ನೇ ಸ್ಕೂಟಿಯೊಂದಿಗೆ ಅನುಮಾನಾಸ್ಪದವಾಗಿ‌ ನಿಂತಿದ್ದ, ಗೇರುಕಟ್ಟೆ ಕಳಿಯಾ ಗ್ರಾಮ ಬೆಳ್ತಂಗಡಿ ನಿವಾಸಿ ಕುಖ್ಯಾತ ಗಾಂಜ ಸಾಗಾಟಗಾರ ಉಮ್ಮರ್‌ ಫಾರೂಕ್‌ ಹಾಗೂ ಸೊಮಂತಡ್ಕ ಮೂಂಡಾಜೆ ಗ್ರಾಮ ಬೆಳ್ತಂಗಡಿ ನಿವಾಸಿ ಸತೀಶ್‌ @ ಸ್ಕಾರ್ಪಿಯೋ ಸತೀಶ್‌ ಎಂಬವರುಗಳನ್ನು ತಪಾಸಣೆ ನಡೆಸಿದಾಗ, ಸದ್ರಿ ಆರೋಪಿಗಳ ವಶದಲ್ಲಿ ಅಂದಾಜು 50000/- ರೂ ಮೌಲ್ಯದ 2.10 ಕೆ.ಜಿ ಗಾಂಜಾ ಹಾಗೂ ಇನ್ನೋರ್ವ ಆರೋಪಿ ಸತೀಶ್‌ @ ಸ್ಕಾರ್ಪಿಯೋ ಸತೀಶ ನ ವಶದಲ್ಲಿ ರೂ 1000/- ಮೌಲ್ಯದ 55 ಗ್ರಾಂ ತೂಕದ ಗಾಂಜಾ ಪತ್ತೆಯಾಗಿರುತ್ತದೆ. ಆದ್ದರಿಂದ ಮುಂದಿನ ಕಾನೂನುಕ್ರಮಕ್ಕಾಗಿ ಸದ್ರಿ ಗಾಂಜಾ, ಕೃತ್ಯಕ್ಕೆ ಬಳಸಿದ ಸ್ಕೂಟರ್ ನ್ನು ಆರೋಪಿಗಳೊಂದಿಗೆ ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 25/2024 ಕಲಂ: 8( c ) ,20(b) NDPS ACT ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!