Tuesday, December 5, 2023
Homeಕರಾವಳಿಬೆಳ್ತಂಗಡಿ : ಧರ್ಮಸ್ಥಳ ಪೆರಿಯಶಾಂತಿ ರಾಜ್ಯ ಹೆದ್ದಾರಿಯ ಪಕ್ಕ ಜೆಸಿಬಿ ಘರ್ಜನೆ; 35 ಅನಧಿಕೃತ ಅಂಗಡಿಗಳ...

ಬೆಳ್ತಂಗಡಿ : ಧರ್ಮಸ್ಥಳ ಪೆರಿಯಶಾಂತಿ ರಾಜ್ಯ ಹೆದ್ದಾರಿಯ ಪಕ್ಕ ಜೆಸಿಬಿ ಘರ್ಜನೆ; 35 ಅನಧಿಕೃತ ಅಂಗಡಿಗಳ ತೆರವು

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ ಪೆರಿಯಶಾಂತಿ ರಾಜ್ಯ ಹೆದ್ದಾರಿಯ ರಸ್ತೆ ಪಕ್ಕದಲ್ಲಿ ಸುಮಾರು ಮೂವತ್ತೈದಕ್ಕೂ ಅಧಿಕ ಅನಧಿಕೃತ ಅಂಗಡಿಗಳನ್ನು ಇಂದು ಲೋಕೊಪಯೋಗಿ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪೊಲೀಸರ ಸಹಕಾರದಲ್ಲಿ ತೆರವುಗೊಳಿಸಿದೆ.

ಧರ್ಮಸ್ಥಳ-ಪೆರಿಯಶಾಂತಿ ರಾಜ್ಯ ಹೆದ್ದಾರಿ 37 ರ ಪಕ್ಕ ಗ್ರಾಮಪಂಚಾಯತಿನಿಂದ ಯಾವುದೇ ಅನುಮತಿ ಪಡೆಯದೆ ಅನಧಿಕೃತ ಅಂಗಡಿಗಳನ್ನು ಹಾಕಿಕೊಂಡು ವ್ಯವಹಾರ ಮಾಡುತ್ತಿದ್ದರಿಂದ ಪ್ರವಾಸಿಗರು ರಸ್ತೆಯಲ್ಲಿ ವಾಹನ ನಿಲ್ಲಿಸಿ ಅಂಗಡಿಗೆ ಹೋಗುತ್ತಿದ್ದರು. ಇದರಿಂದ ರಸ್ತೆಯಲ್ಲಿ ಹೋಗುವ ಸವಾರರಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ಹಲವು ದೂರುಗಳು ಬಂದಿದ್ದು ಅದಲ್ಲದೆ ಬುಧವಾರ ಸಂಜೆ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಬೊಲೆರೋ ವಾಹನ ರಸ್ತೆಯ ಪಕ್ಕದ ನಿಲ್ಲಿಸಿ ಅಂಗಡಿಗೆ ಹೋಗುತ್ತಿದ್ದಾಗ ಬಸ್ ಡಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿ ಏಳು ಮಂದಿ ಗಾಯಗೊಂಡಿದ್ದು ಪ್ರಕರಣದ ಬಳಿಕ ಎಚ್ಚೆತ್ತುಕೊಂಡ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್.ಎಮ್.ಆರ್ ಬುಧವಾರ ರಾತ್ರಿ ಹತ್ತು ಗಂಟೆಗೆ ಪುತ್ತೂರಿನಲ್ಲಿ ಲೋಕಪಯೋಗಿ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ತಕ್ಷಣ ಅನಧಿಕೃತ ಅಂಗಡಿಗಳನ್ನು ತೆರವು ಮಾಡಲು ಸೂಚಿಸಿದ್ದರು. ಅದರಂತೆ ಬೆಳ್ತಂಗಡಿ ಲೋಕಪಯೋಗಿ ಇಲಾಖೆಯ ಇಂಜಿನಿಯರಿಂಗ್ ಹಾಗೂ ಕಡಬ ಮತ್ತು ಬೆಳ್ತಂಗಡಿ ಕಂದಾಯ ಇಲಾಖೆಯ ನೇತೃತ್ವದಲ್ಲಿ ಧರ್ಮಸ್ಥಳ ,ಉಪ್ಪಿನಂಗಡಿ ಪೊಲೀಸರ ಸಹಕಾರದಲ್ಲಿ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.

ಇನ್ನೂ ತೆರವು ಮಾಡಿದ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು ನಾವು ಸಾಲ ಮಾಡಿ ಹಣ್ಣು ಹಂಪಲು ತಂದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದೇವೆ. ಈ ಮೊದಲು ನಿಡ್ಲೆ ಗ್ರಾಮ ಪಂಚಾಯತ್ ಪರವಾನಿಗೆ ನೀಡಿದ್ದರು. ನಂತರ ಅದನ್ನು ನೀಡಲ್ಲಿಲ್ಲ.ಈಗ ಏಕಾಏಕಿ ಬಂದು ನಮ್ಮ ವ್ಯವಹಾರಕ್ಕೆ ತೊಂದರೆ ನೀಡಿದ್ದಾರೆ ನಮಗೆ ಬೇರೆ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಅಪಘಾತದಿಂದ ಎಚ್ಚೆತ್ತ ರವಿಕುಮಾರ್ ಎಮ್.ಆರ್ ಜಿಲ್ಲಾಧಿಕಾರಿಗಳು ಬುಧವಾರ ರಾತ್ರಿ ಪುತ್ತೂರಿನಲ್ಲಿ ನಡೆದ ತುರ್ತು ಸಭೆಯಲ್ಲಿ ರಸ್ತೆ ಪಕ್ಕದ ಅನಧಿಕೃತ ಅಂಗಡಿಗಳನ್ನು ತೆರೆವು ಮಾಡಲು ಸೂಚನೆ ನೀಡಿದ್ದರು ಅದರಂತೆ ಇಂದು ಕಂದಾಯ ಹಾಗೂ ಪೊಲೀಸರ ಸಹಾಯದಿಂದ 35 ಅನಧಿಕೃತ ಅಂಗಡಿಗಳನ್ನು ನೆಲಸಮ ಮಾಡಲಾಗಿದೆ. ಇನ್ನೂ ಮುಂದೆ ಇಲ್ಲಿ ಮತ್ತೆ ಅಂಗಡಿಗಳನ್ನು ನಿರ್ಮಿಸಿ ವ್ಯವಹಾರ ಮಾಡಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಬೆಳ್ತಂಗಡಿ ಲೋಕಪಯೋಗಿ ಇಲಾಖೆಯ ಇಂಜಿನಿಯರ್ ಗುರುಪ್ರಸಾದ್ ಅವರ ಮಾಧ್ಯಮಗಳಿಗೆ ಮಾಹಿತಿ ನೀಡಿದರು‌.

ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಲೋಕಪಯೋಗಿ ಇಲಾಖೆಯ ಇಂಜಿನಿಯರ್ ಗುರುಪ್ರಸಾದ್ ಮತ್ತು ತೌಸಿಫ್ ಅಹಮ್ಮದ್, ತಹಶೀಲ್ದಾರ್ ಪೃಥ್ವಿ ಸಾನಿಕಾಂ, ಕಡಬ ಕಂದಾಯ ನಿರೀಕ್ಷಕ ಪೃಥ್ವಿ , ಗ್ರಾಮಲೆಕ್ಕಿಗ ಸಂತೋಷ್ , ಉಪ್ಪಿನಂಗಡಿ ಪಿಎಸ್ಐ ರಾಜೇಶ್ ಮತ್ತು ತಂಡ , ಧರ್ಮಸ್ಥಳ ಪೊಲೀಸರ ತಂಡ ಭಾಗವಹಿಸಿದರು.

- Advertisement -
spot_img

Latest News

error: Content is protected !!