Friday, April 19, 2024
Homeಕರಾವಳಿಧರ್ಮಸ್ಥಳ : ಕುದ್ರಾಯದಲ್ಲಿ ಬಸ್ ಅಪಘಾತ ಪ್ರಕರಣ: ಬಸ್ ಚಾಲಕನಿಗೆ ಮೂರ್ಛೆ ರೋಗ ಸಮಸ್ಯೆಯಿಂದ ಅವಘಡ:...

ಧರ್ಮಸ್ಥಳ : ಕುದ್ರಾಯದಲ್ಲಿ ಬಸ್ ಅಪಘಾತ ಪ್ರಕರಣ: ಬಸ್ ಚಾಲಕನಿಗೆ ಮೂರ್ಛೆ ರೋಗ ಸಮಸ್ಯೆಯಿಂದ ಅವಘಡ: ನಿರ್ವಾಹಕನ ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ಅನಾಹುತ

spot_img
- Advertisement -
- Advertisement -

ಬೆಳ್ತಂಗಡಿ : ಸರಕಾರಿ ಬಸ್ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿ ಏಳು ಜನರಿಗೆ ಗಾಯಗೊಂಡ ಪ್ರಕರಣಕ್ಕೆ ಸಂಬಂಧ ಸರಕಾರಿ ಬಸ್ ಚಾಲಕನಿಗೆ ಮೂರ್ಛೆ ರೋಗ ಬಂದಿದ್ದರಿಂದ ನಿಯಂತ್ರಣ ಕಳೆದುಕೊಂಡು ಅವಘಡವಾಗಿರುವು ಬೆಳಕಿಗೆ ಬಂದಿದೆ ಇದೆ ವೇಳೆ ನಿರ್ವಾಹಕನಿಂದ ದೊಡ್ಡ ಅನಾಹುತ ತಪ್ಪಿದೆ.

ಮಂಡ್ಯ ಜಿಲ್ಲೆಯ ಹತ್ತು ಮಂದಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದು ನಂತರ ಧರ್ಮಸ್ಥಳದ ಪ್ರವಾಸಿ ವಾಹನ ಬೊಲೋರೊದಲ್ಲಿ ಶಿಶಿಲ ಮತ್ತು ಸೌತಡ್ಕ ದೇವಸ್ಥಾನಕ್ಕೆ ಹೋಗಿ ವಾಪಸ್ ಧರ್ಮಸ್ಥಳಕ್ಕೆ ಬರುವಾಗ ನವಂಬರ್ 23 ರಂದು ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಕುದ್ರಾಯ ಬಳಿ ರಸ್ತೆ ಪಕ್ಕ ಇದ್ದ ಅಂಗಡಿಗೆ ಹೋಗಲು ಸಂಜೆ ವಾಹನ ನಿಲ್ಲಿಸಿ ಬರುತ್ತಿದ್ದರು ಈ ವೇಳೆ ಮೈಸೂರು ಗ್ರಾಮಾಂತರ ಜಿಲ್ಲೆಯ ಪಿರಿಯಾಪಟ್ಟಣ ಡಿಪೋಗೆ ಸೇರಿದ ಬಸ್ ಉಡುಪಿಯಿಂದ ಮೈಸೂರಿಗೆ 16 ಮಂದಿ ಪ್ರಯಾಣಿಕರಿಂದ ಸರಕಾರಿ ಬಸ್ ಏಕಾಏಕಿ ಅಂಗಡಿಗೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಬೊಲೋರೊ ವಾಹನಕ್ಕೆ ಹಾಗೂ ಜನರಿಗೆ ಡಿಕ್ಕಿಹೊಡೆದು ಬಲಭಾಗಕ್ಕೆ ತಿರುಗಿದೆ ಈ ವೇಳೆ ಚಾಲಕನ ಬಳಿಗೆ ನಿರ್ವಾಹಕ ಪ್ರಕಾಶ್ ಬಂದಾಗ ಸ್ಟೇರಿಂಗ್ ಮೇಲೆ ಮೂರ್ಛೆ ತಪ್ಪಿ ಬಿದ್ದಿದ್ದರು ತಕ್ಷಣ ನಿರ್ವಾಹಕ ಎಡಭಾಗಕ್ಕೆ ಸ್ಟೇರಿಂಗ್ ತಿರುಗಿಸಿದಾಗ ಪ್ರಯಾಣಿಕರೊಬ್ಬರು ಬಂದು ಹ್ಯಾಡ್ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಒಂದು ವೇಳೆ ನಿರ್ವಾಹಕ ಪ್ರಕಾಶ್ ಎಚ್ಚೆತ್ತುಕೊಳ್ಳದಿದ್ದಾರೆ ಬಸ್ ಬಲಭಾಗದಲ್ಲಿದ್ದ ನೆರಿಯ ಹೊಳೆಗೆ ಬಿದ್ದು ದೊಡ್ಡ ಅನಾಹುತ ನಡೆಯುತ್ತಿದ್ದು. ಬೊಲೋರೊ ವಾಹನದಿಂದ ಇಳಿದ್ದಿದ್ದ ಮಂಡ್ಯ ಜಿಲ್ಲೆಯ ಓರ್ವ ಸಾವನ್ನಪ್ಪಿದ್ದು ಏಂಟು ಮಂದಿಗೆ ಗಾಯವಾಗಿದ್ದು ಇವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಕಾರಿ ಬಸ್ ಚಾಲಕ ಕುಶಲನಗರದ ನಿವಾಸಿ ವಿಜಯಕುಮಾರ್(43) ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್ ನಿರ್ವಾಹಕ ಹೇಳಿದ್ದೇನು? :ಉಡುಪಿಯಿಂದ ಧರ್ಮಸ್ಥಳಕ್ಕೆ ಸಂಜೆ ಬಂದು ಮೈಸೂರು ಕಡೆ ಪ್ರಯಾಣ ಮಾಡುವಾಗ ಧರ್ಮಸ್ಥಳದಿಂದ ಸುಮಾರು ನಾಲ್ಕು ಕಿಲೋ ಮೀಟರ್ ಬಂದಾಗ ಬಸ್ ಅಂಗಡಿಗೆ ಡಿಕ್ಕಿ ಹೊಡೆದಿದೆ ತಕ್ಷಣ ಚಾಲಕನ ಬಳಿ ಬಂದಾಗ ಸ್ಟೇರಿಂಗ್ ಮೇಲೆ ಬಿದ್ದಿದ್ದರು ಮತ್ತೆ ವಿದ್ಯುತ್ ಕಂಬಕ್ಕೆ ಸ್ವಲ್ಪ ಡಿಕ್ಕಿಯಾಗಿ ಬಸ್ ಬಲಭಾಗದ ಪ್ರಪಾತ ಇದ್ದ ಹೊಳೆಗೆ ಭಾಗಕ್ಕೆ ತಿರುವಾಗ ತಕ್ಷಣ ಎಡಭಾಗಕ್ಕೆ ಸ್ಟೇರಿಂಗ್ ತಿರುಗಿಸದೆ ಹೊಂದೆ ಪ್ರಯಾಣಿಕರೊಬ್ಬರು ಬಂದು ಹ್ಯಾಡ್ ಬ್ರೇಕ್ ಹಾಕಿದ್ದಾರೆ ಅಗ ಬಸ್ ನಿಂತಿದೆ ಒಂದು ವೇಳೆ ಬಸ್ ಚಾಲಕನ ಬಳಿಗೆ ಹೋಗದಿದ್ದಾರೆ ಬಸ್ ಪ್ರಪಾತ ಇದ್ದ ಹೊಳೆಗೆ ಬಿದ್ದು ದೊಡ್ಡ ಅನಾಹುತ ನಡೆಯುತ್ತಿತ್ತು ಎಂದು ಘಟನೆ ಬಗ್ಗೆ ಬಸ್ ನಿರ್ವಾಹಕ ಪ್ರಕಾಶ್ ಮಹಾಎಕ್ಸ್ ಪ್ರೆಸ್ ಜೊತೆ ಮಾತಾನಾಡಿ ಹೇಳಿದರು.

ಅಪಘಾತ ಸಂಬಂಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!